ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವತಾಸ್ತುತಿ ಮತ್ತು ಗುರುಸ್ತುತಿ ಅರಸಿನಂತೆ ಬಂಟನೋ ಹನುಮರಾಯ ಪ ಅರಸಿನಂತೆ ಬಂಟನೆಂಬುದ ನೀನುಕುರುಹು ತೋರಿದೆ ಮೂರು ಲೋಕಕೆ ಹನುಮ ಅ ಒಡೆಯನಂಬುಧಿಯೊಳು ಪೊಕ್ಕು ದೈತ್ಯನ ಕೊಂದುತಡೆಯದೆ ಶ್ರುತಿಯನಜಗಿತ್ತನೆಂದುಸಡಗರದಿಂದ ಶರಧಿಯ ದಾಂಟಿ ಮಹಿಜೆ ಪೆ-ರ್ಮುಡಿಯ ಮಾಣಿಕವ ರಾಘವಗಿತ್ತೆ ಹನುಮ 1 ಮಂದರಧರ ಗೋವರ್ಧನ ಗಿರಿಯನು ಲೀಲೆ-ಯಿಂದಲಿ ನಿಂದು ನೆಗಹಿದನೆಂದುಸಿಂಧು ಬಂಧನಕೆ ಸಮಸ್ತ ಪರ್ವತಗಳತಂದು ನಳನ ಕೈಯೊಳಗಿತ್ತೆ ಹನುಮ2 ಸಿರಿಧರ ವರ ಕಾಗಿನೆಲೆಯಾದಿಕೇಶವಸುರರಿಗಮೃತವನು ಎರೆದನೆಂದುವರ ಸಂಜೀವನವ ತಂದು ಸೌಮಿತ್ರಿಗಂದುಎರೆದು ಶ್ರೀರಾಮನ ನಿಜದೂತನೆನಿಸಿದೆ ಹನುಮ 3
--------------
ಕನಕದಾಸ
ಹೂವ ತರುವರ ಮನೆಗೆ ಹುಲ್ಲ ತರುವೆ ಪ ಆವ ಪರಿಯಲಿ ಸಲಹೊ ದೇವ ಚಿನ್ಮಯನೆ ಅ ಈರೇಳು ಜನ್ಮದಿಂ ದಾಸನಾಗಿಹೆ ನಾನುಸೇರಿದೆನೊ ತವ ಶರಣರ ಸೇವೆಗೆಘೋರ ದುರಿತಗಳೆಂಬ ವಾರಿಧಿಯ ಬತ್ತಿಸಿನಾರಸಿಂಹನೆ ಕಾಯೊ ನಮ್ಮ ಕುಲಸ್ವಾಮಿ 1 ರಂಗನಾಥನೆ ನಿನ್ನ ಡಿಂಗರಿಗನೋ ನಾನುಡಂಗುರವ ಹೊಯಿಸಯ್ಯ ದಾಸನೆಂದುಭಂಗಪಡಿಸದೆ ನಿನ್ನ ಶರಣರೊಳಗಿಂಬಿಟ್ಟುಗಂಗೆ ಜನಕನೆ ಕಾಯೊ ಚರಣಕ್ಕೆ ಶರಣು 2 ಎಷ್ಟು ಮಾಡಲು ನಿನ್ನ ಬಂಟನೋ - ವೈಷ್ಣವರಹುಟ್ಟು ದಾಸಿಯ ಮಗನು ಪರದೇಶಿಯೋಸೃಷ್ಟಿಗೊಡೆಯ ಕಾಗಿನೆಲೆಯಾದಿಕೇಶವನೆ - ಕೈಬಿಟ್ಟೆಯಾದರೆ ನಿನಗೆ ಹರಿದಾಸರಾಣೆ 3
--------------
ಕನಕದಾಸ