ಭಕ್ತಿಯನು ಪಾಲಿಸುತ ಭಕ್ತರನು ಪಾಲಿಸುವ
ಮುಕ್ತಿದಾಯಕ ಹರಿಯ ಸೇವೆಯನು ಮಾಳ್ಪೇ ಪ
ಪಂಚೇಂದ್ರಿಯವ ಗೆದ್ದು ಪಂಚಾಮೃತಗಳಿಂದ
ಕಂಚಿಪುರ ವಾಸಿಯ ಕಾಯವನು ತೊಳೆದೂ 1
ಆರು ಅಂಗಳ ಜೈಸಿ ಆರು ಶಾಸ್ತ್ರಗಳಿಂದ
ಧಾರೆ ಪುರವಾಸಿಗೇ ಗಂಧ ಲೇಪಿಸುತಾ 2
ಚಾರು ವೇದಗಳಿಂದ
ನಿತ್ಯ ಪುಷ್ಪವೇರಿಸುತ 3
ಎಂಟ ಕೀಳರ ಗೆದ್ದು ತುಂಟರೈವರ ಕೊಂದು
ಬಂಟನಾಗುತ ಹರಿಯ ಮಹಿಮೆಯನು ಭಜಿಸಿ 4
ಶಾಪ ತಾಪವ ಕಳೆದು ತ್ರಿಪುರಾರಿ ವದ್ಯನಿಗೆ
ಧೂಪದೀಪಗಳಿಂದ ಆರತಿಯ ಬೆಳಗೀ 5
ಅನುಮಾನವನು ತ್ಯಜಿಸಿ ಶ್ರೀ ಚೆನ್ನಕೇಶವನಿಗೆ
ತನುಮನ ಧನದಿಂದ ಆತ್ಮವರ್ಪಿಸುವೇ 6