ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಯದ ಮಾತೆಲ್ಲ | ಸುಳ್ಳದೆ | ಖರೆಯಾಗಿ ನಿಂತದೆ ಪ ಗಂಧರ್ವಪುರದಿಂದ | ನೋಡಮ್ಮಾ | ಬಂಜೆಯ ಮಗತಾ ಬಂದು | ಭೀಷ್ಮನ ಮಗಳಿಗೆ | ಮದುವ್ಯಾದ 1 ಸೊಂಟನ ಕೈಯಿಂದ | ನೋಡಮ್ಮಾ | ಗಗನ ಪುಷ್ಪವ ತರಿಸಿ |ಕೊರಳೊಳು | ಮಾಲೆಯ ಹಾಕಿದರಂತೆ 2 ಪರ್ವತ ಕೊನೆ ಮೇಲೆ | ನೋಡಮ್ಮಾ | ಮೃಗಜಲ ನದಿಯಂತೆ |ಅದರೊಳು | ಕಲ್ಲಿನ ಹರಗೋಲಂತೆ 3 ಮೊಲವೆದ್ದು ಇರಿಯಲ್ಕೆ | ನೋಡಮ್ಮ | ಹರಗೋಲನ ಹರಿದು | ಒಳಗಿದ್ದ ಬಂಜಿಯ ಮಗ ಹರಿದ್ಹೋದಾ 4 ಮೀನುಗಳಿಷ್ಟೂ ಕಂಡೂ | ನೋಡಮ್ಮ | ಶವ ತೆಗೆದು ಹೊರಗ್ಹಾಕಿ | ವನಕೊಯ್ದು | ದಹನವ ಮಾಡಿದವಂತೆ 5 ಇಷ್ಟು ಕುರುಡಾ ಕಂಡಾ | ನೋಡಮ್ಮಾ | ಹೆಳವಾ ಹೇಳಲಿ ಬಂದಾ | ಕಿವುಡನಿಗೆ | ಮೂಕ ಹೇಳಿದನಂತೆ 6 ಪರಿ ಸಂಸಾರ ನೋಡಮ್ಮಾ | ಮಾಯದ ವಿಸ್ತಾರ | ಶಿವರಾಮಾ ತಾ | ಕೇಳಿ ಬೆರಗಾದಾ 7
--------------
ಶಿವರಾಮರು
ಮುಳ್ಳು ಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿಎರಡು ಹೂಳು, ಒಂದು ತುಂಬಲೆ ಇಲ್ಲ 1 ತುಂಬದ ಕೆರೆಗೆ ಮೇಯಾಕ ಬಂದವು ಮೂರು ಎಮ್ಮಿಎರಡು ಗೊಡ್ಡು ಒಂದು ಕಂದು ಹಾಕಿ ಕರುವೇ ಇಲ್ಲ 2 ಕರುವಿಲ್ಲದ ಎಮ್ಮಿಯ ಕೂಡಿದರ ಮೂವರು ಹೆಣ್ಮಕ್ಕಳಾಇಬ್ಬರು ಬಂಜಿಯರು, ಒಬ್ಬಾಕಿ ಹಡೆದೇ ಇಲ್ಲ 3 ಹಡೆಯದ ಹೆಣ್ಣ ಕೂಡಿಕೊಂಡರು ಮೂವರು ಕುಂಬಾರರುಇಬ್ಬರು ಚೊಂಚರು, ಒಬ್ಬಗೆ ಕೈಯೇ ಇಲ್ಲ 4 ಕೈಯಿಲ್ಲದ ಕುಂಬಾರ ಮಾಡಿಕೊಟ್ಟ ಮೂರು ಮಡಿಕಿಗಳಎರಡು ದದ್ದು, ಒಂದಕೆ ತಳವೆ ಇಲ್ಲ5 ತಳವಿಲ್ಲದ ಮಡಕಿಗಿ ಕೊಟ್ಟಾರ ಮೂರು ರೊಕ್ಕಎರಡು ನಕಲು, ಒಂದು ಸವಕಲು 6 ಸವಕಲು ರೊಕ್ಕದಾಗ ಕುಚ್ಚಲಿಕೆ ತಂದಾರ ಮೂರ ಕಡುಬಎರಡು ಕುದಿಯಲಿಲ್ಲ ಒಂದು ಬೇಯಲಿಲ್ಲ 7 ಬೇಯದ ಕಡುಬಿಗಿ ಬಂದಾರ ಮೂವರು ಬೀಗರಇಬ್ಬರು ಬೊಚ್ಚರು, ಒಬ್ಬಗೆ ಹಲ್ಲೇ ಇಲ್ಲ 8 ಹಲ್ಲಿಲ್ಲದ ಬೀಗನಿಗೆ ಕೊಟ್ಟಾರ ಮೂರು ಚಿಕಣಿ ಅಡಕಿಎರಡು ಗೋಟು, ಒಂದು ಸಿಡಿದು ಕಾಣೆಯಾಯಿತು 9 ಕಾಣೆಯಾದ ಅಡಿಕಿಯ ನೋಡಾಕಂತ ಹೋಗ್ಯಾರ ಮೂರ ಮಂದಿಇಬ್ಬರು ಒಂಚೊರಿ, ಒಬ್ಬಗೆ ಕಣ್ಣೇ ಇಲ್ಲ10 ಕಣ್ಣಿಲ್ಲದವನ ಕರೆತರಬೇಕಂತ ಹೋಗ್ಯಾರ ಮೂರ ಮಂದಿಇಬ್ಬರು ಕುಂಟರು, ಒಬ್ಬಗೆ ಕಾಲೇ ಇಲ್ಲ 11 ಕಾಲಿಲ್ಲದವನ ಹೊತ್ತು ತರಬೇಕಂತ ಹೋಗ್ಯಾರ ಮೂರು ಮಂದಿ ಇಬ್ಬರು ಲಂಡರು, ಒಬ್ಬ ಮೊಂಡ 12 ಕಾಗಿನೆಲೆ ಕನಕದಾಸ ಹಾಕಿದ ಮುಂಡಗಿಇದ ತಿಳಿದವ ಜಾಣ. ಒಡೆದು ಹೇಳಿದವ ಕೋಣ13
--------------
ಕನಕದಾಸ