ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ | ಕೋಲು ಸದ್ಗುರುವಿನಾ ಬಲಗೊಂಬೆ ಕೋಲೆ ಪ ಶರಣು ಶರಣು ಗುರುವೇ ಶರಣರ ಸುರತರುವೆ | ಶರಣರ ಹೃದಯದೊಳಗಿರುವೇ ಕೋಲೆ | ಅನುದಿನ | ಕರುಣದ ಮಳೆಯಾಗರೆವುತ ಕೋಲೆ 1 ಕರಣ ತೃಯದಿನಂಬಿ ಸ್ಮರಣೆಯ ಮಾಡಲು | ಧರಣಿಯಲಿಷ್ಟಾರ್ಥ ಕೊಡುತಿಹ ಕೋಲೆ | ಧರಣಿಯಲಿಷ್ಟಾರ್ಥ ಕೊಡುತಿಹ ಜನದಂತ ಕರಣದೊಳಗೆ ಬಯಕೆ ನಿಲದಂತೆ ಕೋಲೆ 2 ಚರಣ ಸರಸಿಜಕ ಶರಣ ಹೋಗಲು ಜನ್ಮ | ಮರಣದ ಭಯಕಂಜಿ ಜನರು ಕೋಲೆ | ಮರಣದ ಭಯಕಂಜಿ ಜನರು ಬರೆ ಕಂಡು | ಕರುಣಾ ಕಟಾಕ್ಷದಿ ನೋಡುವ ಕೋಲೆ 3 ಕರದಿಂದ ಪಿಡಿದವನ ತರಣೋಪಾಯದ ಬೋಧಾ | ಭರದಿಂದ ಬೀರುವೆ ಮನಸಿಗೆ ಕೋಲೆ | ಭರದಿಂದ ಬೀರುವೆ ಮನಸಿಗೆ ಭವದೊಳು | ಮರಳ್ಯವ ಸಿಕ್ಕದಂತೆ ಮಾಡುವೆ ಕೋಲೆ 4 ಜ್ಞಾನವೆಂಬಂಜನೆ ಸೂನಯನಕ ಊಡಿ | ಹೀನ ಅಜ್ಞಾನವ ಹರಿಸೂವ ಕೋಲೆ ಹೀನ ಅಜ್ಞಾನವ ಹರಿಸುವೆ ಬೇಗದಿ | ಸ್ವಾನುಭವದ ಸುಖ ಬೀರುವೆ ಕೋಲೆ 5 ನಾನಾ ಹಂಬಲವನ ಏನೆನುಳಿಯದ್ಹಾಂಗ | ತಾನಿದ್ದ ಬದಿಯಲಿ ಇಹಪರ ಕೋಲೆ | ತಾನಿದ್ದ ಬದಿಯಲಿ ಇಹಪರ ಸುಖಗಳ | ನೀನಿದಿರಿಡುತಿಹೆ ಸದಮಲ ಕೋಲೆ 6 ಎಂಟು ಸಿದ್ಧಿಗಳು ಉಂಟಾಗಿ ಬಂದರೆ | ವೆಂಟಣಿಸಿ ಅದರ ಕಡೆಗೇ ಕೋಲೆ | ವೆಂಟಣಿಸಿ ಅದರ ಕಡೆಗೇ ನೋಡ ನಿನ್ನ | ಬಂಟನೆಯ ಮಹಿಮೆಯ ಜಗದೊಳು ಕೋಲೆ 7 ನಿನ್ನ ಮಹಿಮೆಯನ್ನು ಇನ್ನು ನಾ ಪೊಗಳಲು | ಎನ್ನಳವಲ್ಲಾ ಜಗಕಲ್ಲಾ ಕೋಲೆ | ಎನ್ನಳವಲ್ಲಾ ಜಗಕಲ್ಲಾ ಸದ್ಗುರು | ನಿನ್ನ ಮಹಿಮೆ ಬಲ್ಲೆ ನೀನವೆ ಕೋಲೆ 8 ಮಹಿಗೆ ನೀ ಪತಿಯಾಗಿ ವಿಹರಿಸುತಿಹೆ ದೇವಾ | ಸಹಕಾರನಾಗಿ ಭಕ್ತರ್ಗೆ ಕೋಲೆ | ಸಹಕಾರನಾಗಿ ಭಕ್ತರ್ಗೆ ಅನವರತ | ಅಹಿತರವಂಡಣೆ ಮಾಡುತ ಕೋಲೆ 9 ಮುನ್ನಿನಪರಾಧವ ಇನ್ನೇನು ನೋಡದೇ | ಎನ್ನನುದ್ಧರಿಸು ದಯದಿಂದ ಕೋಲೆ | ಎನ್ನನುದ್ಧರಿಸು ದಯದಿಂದ ಮತಿಕೊಟ್ಟು | ನಿನ್ನ ಕೀರ್ತಿಯ ಕೊಂಡಾಡುವಂತೆ ಕೋಲೆ 10 ಎಂದೆಂದು ನಿಮ್ಮ ಪದ ಹೊಂದಿದ್ದವನು ನಾನು | ಕುಂದ ನೋಡದೇ ಸಲಹಯ್ಯಾ ಕೋಲೆ ಕುಂದ ನೋಡದೇ ಸಲಹಯ್ಯಾ ಮಹಿಪತಿ | ಕಂದನು ಮುಗ್ಧನೆಂದು ಬಿಡಬ್ಯಾಡಿ ಕೋಲೆ 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಳಿರೆ ನಿಮ್ಮಯ ಗುಣವ ವರ್ಣಿಸಲಳವೆಜಲಧಿಸಮಗಂಭೀರ ಜಯತೀರ್ಥವರ್ಯ ಪ. ನಿನ್ನ ಕೃತಿಯೆಂಬಂಜನವ ದೃಷ್ಟಿಯೊಳಿಟ್ಟುಸನ್ನ್ಯಾಯ ವಿವೃತ್ತಿ ಮತ ಭೇದಗಳಲ್ಲಿಪನ್ನಂಗಶಯನನ ಭಕ್ತಿಯಿಂದ ಪ್ರ-ಸನ್ನವನೆ ಮಾಡಿ ಪುರುಷಾರ್ಥವೀವುದೊ 1 ಆವ ಪರಿಯಿಂದ ಅರ್ಜುನನು ರಣದೊಳು ಪೊಕ್ಕುದೇವನುದರದಿ ಕಂಡನೀ ವಿಶ್ವರೂಪಆವಂದದಿ ಗುರು ಶ್ರೀಮದಾನಂದತೀರ್ಥರಭಾವಗಳನೆ ತಿಳಿದೆ ಭಾಷ್ಯಾದಿಗಳಲಿ 2 ಬುಧರು ನಿನ್ನಯ ನ್ಯಾಯಸುಧೆಯ ಶ್ರವಣವ ಸ-ವಿದು ಉದ್ಧರಿಸಿ ಮೋಹಂಗಳ ಮುಪ್ಪುಗಳ ಕಳೆದುಒಂದಧಿಕ ಬಲದಿಂದ ಒದ್ದು ಮಾಯಿ ದಿತಿಜರನುಒದಗಿ ಕಾಮವೆಂಬ ಕ್ಷುಧೆಗಳ ಅಳಿವರೊ 3 ಮಧ್ವರಾಯರೆಂಬುದು ಮತ್ತೊಂದು ರೂಪದಲಿಇದ್ದು ನುಡಿದಂದದಲಿ ಸಿದ್ಧಾಂತವನು ನೀ ಉದ್ಧರಿಸಿ ಲೋಕದಲಿಅದ್ವೈತ ಮತದವರ ಉದ್ಯೋಗದಿಂದ ಬಲುಮುಗ್ಧರನು ಮಾಡಿದೆ4 ಬರಿದೆ ಮಾತುಗಳಿಂದ ಬಂದ ವಿದ್ಯಾರಣ್ಯನಮರುಳು ಮಾಡಿದೆ ಗ್ರಂಥsÀಕರಣದಿಂದ ಪರರನರಿಗಳನು ಮಾಡಿದಾಶ್ಚರ್ಯ ಕಾರಣಪುರುಷವರ ಹಯವದನನ ಪಾದಸರಸಿಜಭೃಂಗ 5
--------------
ವಾದಿರಾಜ
ಭಾವಭಕ್ತಿಗೊಲಿವ ತಾಂ ಶ್ರೀಹರಿ ಕಾವ ಕರುಣದಲಿ ಪರೋಪರಿ ಧ್ರುವ ಕಂದ ಪ್ರಹ್ಲಾದನ ಸದ್ಭಾವಕಾಗಿ ಸಂಧಿಸೊದಗಿ ಬಂದ ನರಸಿಂಹನಾಗಿ ತಂದೆ ತಾಯಿ ಬಂಧು ಸಮಸ್ತವಾಗಿ ಬಂದು ರಕ್ಷಿಸಿದ ಪ್ರತ್ಯಕ್ಷವಾಗಿ 1 ಭಾವದಿಂದ ದ್ರೌಪದಿಗಾಗ್ಯಧ್ಯಕ್ಷ ಠಾವಠಾವಿಲಿ ಕಾಯಿದೆ ಪ್ರತ್ಯಕ್ಷ ಭುವನದೊಳಾಗಿ ಪಾಂಡವಪಕ್ಷ ಜೀವ ಪ್ರಾಣಾಗಿ ಮಾಡಿದ ಸಂರಕ್ಷ 2 ಭಾವದಿಂದಾಗುವ ಭಕ್ತರಾಧೀನ ದೇವೋತ್ತಮದ ಬಿಟ್ಟು ಹಿರಿಯತನ ದಾವದೊಂದೇಕಾಗಿ ತಾಂ ಸಾವಧಾನ ಈವ್ಹಾಭಕ್ತರ ಮನಿಲ್ಯನುದಿನ 3 ಭಾವದಿಂದುದಿಸುವ ಸ್ವಯಂಭಾನು ಭಾವಿಕರಿಗಾಗುವ ಶ್ರಯಧೇನು ಭಾವದಿಂದಾಗುವ ಸಫಲ ತಾನು ಭಾವದಿಂದ ಭಾವ ಪೂರಿಸಿದನು 4 ಭಾವವೆಂಬಂಜನ ಕಣ್ಣಿಲೂಡಿ ಭಾವದಲುಂಬುದನು ಒಡಮೂಡಿ ಭಾವದಿಂದ ಮಹಿಪತಿ ಕೈಯಗೂಡಿ ಜೀವ ಪಾವನ್ನಗೈಸÀುತಿಹ್ಯ ನೋಡಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುರವೃಂದ ವಾರಿಧಿಶಯನ ಗೋವರ್ಧನೋದ್ಧರಣ ಚಾರುಚರಣ ಪ ವಾರಿಜದಳ ನಯನ ವಾರಿಧಿಶಯನ ಉರ್ವಿಭಾರಾಪಹರಣ ಸಾರಿದಜನ ಸಂಸಾರಿಸಿರಿಯಣ 1 ಭಂಜನ ಹರಣ ಪಾರ್ಥಿವ ಕುಲರಂಜನ ಚಾತುರ್ಯತರ ಜಾಣ ಚೇತನಾತ್ಮಕ ಸುಗುಣ ಜಾತ ರಹಿತ ಜನಜಾತ ಸಂಜೀವನ 2 ದೇವಕಿ ವರನಂದನ ದಿವಿಜನುತ ರಾವಣಾಸುರ ಬಂಜನ ಮಾವ ಕಂಸಾಂತಕ ಮಾವಧುನಾಯಕ ಸೇವಿತ ರಕ್ಷಕ ಶರ್ವಾಣೀವರ ಸಖ 3 ಭಂಜನ ನಾರದ ನುತ ವಾನರಪತಿ ಪರಿಪಾಲನ ದೀನಜನರ ಪೋಷ ಭಾನು ಕೋಟಿ ಪ್ರಕಾಶ ಮನಮೋಹನ ರೂಪ ಲೀಲಾರ ಮಾಲೋಲ 4 ಚಿಂತತ ಫಲದಾಯಕ ಭಕ್ತರ ಹೃದಯಾಂತರಂಗದ ನಾಯಕ ಕಂತು ಜನಕ ಲಕ್ಷ್ಮೀಕಾಂತ ಭೀಮನ ಕೋಣೆ ಸಂತತವಾಸ ತಕ್ಷಕಾಂತಕಾರೂಢ ಹರಿ 5
--------------
ಕವಿ ಪರಮದೇವದಾಸರು