ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿಯ ಬೆಳಗಬನ್ನಿರೆ ಆರತಿಯ ಬೆಳಗಬನ್ನಿರೆ ಪಾರ್ವತಿದೇವಿಯರಿಗೆ ಕೀರುತಿ ಕೊಂಡಾಡುತಲಿ ಪರ್ವತರಾಜನ ಮಗಳಿಗೆ ಆರತಿಯ ಬೆಳಗಬನ್ನಿರೆ ಪ ವಾಲೆ ಕಠಾಣಿ ಚಿಂತಾಕು ಮ್ಯಾಲೆ ಸರಿಗೆ ಸರ ಮುತ್ತುಗಳು ಕಾಲಗೆಜ್ಜೆಸರಪಳಿನಿಟ್ಟ ಫಾಲಾಕ್ಷನ ಮಡದಿಗೆ 1 ರಂಗುಮಾಣಿಕ್ಯದ ಹೆರಳು ಬಂಗಾರದಾಭರಣವಿಟ್ಟು ದುಂಡುಮಲ್ಲಿಗೆ ಮುಡಿದು ಕುಳಿತ ಮಂಗಳಾದೇವಿಯರಿಗೆ 2 ದುಂಡುಮುತ್ತಿನ ಮುಕುರ್ಯವು ಚಂದ್ರ ಬಾಳ್ಯಬುಗುಡಿನಿಟ್ಟು ದುಂಡು ಹರಡಿ ಕಂಕಣಕಮಲ ದ್ವಾರ್ಯನಿಟ್ಟ ವಾರಿಜಾಕ್ಷಿಗೆ 3 ಜಾತಿಮಾಣಿಕ್ಯದ ವಂಕಿ ನೂತನಾದ ನಾಗಮುರಿಗೆ ಪ್ರೀತಿಯಲಿ ಪೀತಾಂಬ್ರನುಟ್ಟು ಜ್ಯೋತಿಯಂತೆ ಹೊಳೆವೊ ಗೌರಿಗೆ 4 ನೀಲವರ್ಣ ಭೀಮೇಶಕೃಷ್ಣ ಧ್ಯಾನಮಾಡುತ ಕೃಷ್ಣನ ನೀಲಕಂಠನ ಸಹಿತ ಕುಳಿತ್ವಿಶಾಲನೇತ್ರೆ ಪಾರ್ವತಿಗೆ5
--------------
ಹರಪನಹಳ್ಳಿಭೀಮವ್ವ
ಭೀಮ ಶೈನನೆ ಸತ್ಯಭಾಮಾ ಪ್ರಿಯನ ಪರಮ ಪ್ರೇಮ ಪಾತ್ರನೆ ಪಾಹಿಮಾಂ ಪ ಭೂಮಿಯೊಳು ಶೇವಿಸುವರಿಗೆ ಸುರ ಭೂಮಿರುಹ ವೆಂದೆನಿಸಿ ಪೊರೆಯಲು ಗ್ರಾಮ ಮೋತಂಪಲ್ಲಿ ಕ್ಷೇತ್ರ ಸುಧಾಮರಿಪುಕುಲ ಭೀಮನೆನಿಸಿದ ಅ.ಪ ರಾಮಕಾರ್ಯವನು ನಿಷ್ಕಾಮದಿ ಸಾಧಿಸಿ ಧಾಮ ಕಿಂಪುರುಷದಲ್ಲಿ ಭೂಮಿಜಾವಲ್ಲಭನ ಶುಭಗುಣ ಸ್ತೋಮಗಾನದಿ ರಮಿಸುತಿರೆ ಬಡ ಭೂಮಿದೇವನ ಪ್ರಾರ್ಥನದಿ ಬಂದೀ ಮಹಾ ಶಿಲೆ ಯೊಳಗೆ ನೆಲಸಿಹ 1 ರಾಜಕುಲಜ ಪಾಂಡುರಾಜ ನಾತ್ಮಜ ಧರ್ಮರಾಜನನುಜನೆನಿಸಿ ರಾಜ ಸೂಯಾಗವನೆ ಮಾಡಿಸಿ ಪೂಜಿಸಿದಿ ಸಿರಿಕೃಷ್ಣನಂಘ್ರಿಯ ರಾಜ ಕೌರವ ಬಲವ ಮದಿಸಿ ವಿರಾಜಿಸಿದ ಸುರರಾಜ ನಮೋ ನಮೋ 2 ಪುಟ್ಟಿಮೇದಿನಿ ಸುರಸದ್ಮದಿ ಗಜ ಪಂಚಾಸ್ಯನೆನಿಸಿಸು ಜನಕತಿ ಮೋದನೀಡಿದ 3 ಗಣಕೆ ಗಂಧವಾಹನನೆನಸಿ ಶೇಷ ಗಿರೀಂದ್ರಯಾತ್ರೆಗೆ ವೃಂದ ಸಲಹುವಿ 4 ಶೇರಿದವನೆ ಧನ್ಯನೋ ಭಜಿಸಿ ವಿಮುಕ್ತನಾದನು ಸುರಋಷಿಯ ಪದವನು 5 ಸುವಿಶಾಲ ಮಂಟಪ ಮಧ್ಯದಿ ಕೈಕೊಳುತ ಭಕುತರ ಗುರುವರ ಪಾಲಿಸೆನ್ನನು 6 ಬಂಗಾರದಾಭರಣಂಗಳಿಂದೊಪ್ಪುತ ಶೃಂಗಾರದಿಂ ಶೋಭಿತ ಸರ್ವೇಷ್ಟದಾಯಕ ಪ್ರಥಮಾಂಗನೆನಿಸಿದ 7
--------------
ಕಾರ್ಪರ ನರಹರಿದಾಸರು
ರಂಗನಾಥ ಮಾಂ ಗಂಗಾಜನಕ ತುಂಗ ಮಹಿಮ ಮಂಗಳಾಂಗ ಪಾಹಿ ಪ ತಿಂಗಳ ತೇಜದಲಿ ಪೊಳೆಯುತ ಕಂಗೊಳಿಸುವ ಮುಕುಟ ಮಂಡಿತ ಬಂಗಾರದಾಭರಣ ಭೂಷಿತ ಶೃಂಗಾರದಿ ರಥವನೇರುತ ಮಂಗಳ ವಾದ್ಯಂಗಳುಲಿಯೆ ರಂಗನಾಥ ಪ್ರತಿವರ್ಷದಿ ತುಂಗಛತ್ರ ಚಾಮರ ವ್ಯಜ- ನಂಗಳ ವಿಭವದಿ ಬರುತಿರೆ ಕಂಗಳಿಂದ ನೋಳ್ಪ ಭಕ್ತ ಜಂಗುಳಿ ಪಾಲಿಸಲೋಸುಗ ಮಂಗಳಸಿರಿ ಜಾಲಹಳ್ಳಿ ಪುರನಿಲಯ ಪೊರೆ ಎನ್ನ1 ಹಿಂದಕೆ ಮುದಗಲ್ಲು ಪುರದಿ ಬಂದಿಹ ಉಪ್ಪಾರ ಜನದಿ ಬಂದು ಗೋಣಿಯೊಳಗೆ ಮುದದಿ ನಿಂದಿಯೊ ಪದಮೆಟ್ಟೆ ಬೆಟ್ಟದಿ ಅಂದಿನ ರಾತಿಯ ಸ್ವಪ್ನದಿ ಸಂದರ್ಶನವಿತ್ತು ಪುರದಿ ಮಂದಿರಕಾರ್ಯವ ಸೂಚಿಸ- ಲಂದು ರಾಯಗೌಡನಿಂದ ಬಂಧುರದಲಿ ನಿರ್ಮಿತ ಆ- ನಂದನಿಲಯ ಮಂದಿರ ಮು ಕುಂದನಂದ ಕಂದನೆ ಮದ್ ಹೃದಯದಲಿ ಸದಾತೋರೋ2 ವಾರಿಚರ ಮಂದರಧರ ಭೂ ಚೋರಮಥನ ಘೋರರೂಪನೆ ಚಾರು ಬ್ರಹ್ಮಚಾರಿ ವಾಮನ ಶೂರ ಪರಶುರಾಮನೆ ನಮೊ ಧಾರುಣಿ ಜಾವಲ್ಲಭ ಕಂ- ಸಾರಿ ವಸನದೂರನೆ ಹಯ ವೇರಿ ದುಷ್ಟ ದಿತಿಜರ ಭಯ ದೂರ ಮಾಡಿ ಕಾವದೇವ ಧಾರುಣಿಸುರ ಪರಿಪಾಲಕ ವಾರಿಜಭವ ನುತ ಕಾರ್ಪರಾ- ಗಾರವೀರ ನಾರಸಿಂಹ ನಮಿಸುವೆನು ರಮಾರಮಣ3
--------------
ಕಾರ್ಪರ ನರಹರಿದಾಸರು