ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅದ್ಭುತ ಅದ್ಭುತ ಪರಮಾದ್ಭುತನೆ ಪ ಮಧ್ವರ ಚರಣದಿ ಬಿದ್ದ ಜನರಪರಿ ಶುದ್ಧಗೈದು ಸುಖ ಸಿದ್ಧಿಗೊಳಿಪ ಹರಿ ಅ.ಪ ಅನವದ್ಯ ಪರಾತ್ಪರ ಶುದ್ಧ ಸುಖಾತ್ಮಕ ಕದ್ದನೆ ಬೆಣ್ಣೆಯನು ಮಧ್ವರ ದೇವನು ಪದ್ಮಾಲಯ ಪತಿ ಸಿದ್ಧಿ ಸುವಂದಿತ ಕದ್ದನೆ ಕನ್ಯೆಯನು 1 ಮೇದಿನಿ ತಂದವ ಮೇದಿನಿ ಅಳಿಯನೆ ವೇದವ ತಂದವ ವೇದಸು ಬÉೂೀಧಕ ಬುದ್ಧನು ಆಗುತ ವೇದವ ನುಳುಹಿದನೆ 2 ಸತ್ಯವತೀ ಸುತ ಸತ್ಯನ ಸತ್ಯನು ಬತ್ತಲೆ ನಿಲ್ಲುತ ಸತಿಯರ ಕೆಡಸಿದನೆ ಕತ್ತಲೆ ಕಾಣದ ಉತ್ತುಮ ದೇವನು ಮಿಥ್ಯಾಜ್ಞಾನವ ಬಿತ್ತಿದನೆ 3 ಅನ್ನಾದನ್ನನು ಅನ್ನದ ಬೃಹತೀ ಅನ್ನನು ಸತಿಯರ ಅನ್ನವ ಬೇಡಿದನೆ ಉಣ್ಣದೆ ರಾಜನ ಅನ್ನವ ವಿದುರನ ಅನ್ನವ ನುಂಡನು ಸಣ್ಣವನೆನ್ನದಲೆ 4 ನಿಂದೆಯ ಸುರಿಸಿರೆ ನಂದವ ನೀಡಿದ ವಂದಿಸಿ ರಾಜ್ಯವ ಮುಂದಿಡೆ ಜರಿದವನೆ 5 ಅಣ್ಣನ ಕೊಂದು ತಮ್ಮನ ಸಲಹಿದ ಸಣ್ಣನು ತಮ್ಮನ ಅಣ್ಣನ ಮಾಡಿದ ಅಣ್ಣ ತಮ್ಮಂದಿರ ನುಣ್ಣಗೆ ಸವರಿದ ಅಗಣ್ಯ ಮಹಿಮ ಮೈಗಣ್ಣಗೆ ವಲಿದಿಹನೆ 6 ಭಾರೀ ಗಿರಿಧರ ನಾರಿಯು ಆದನು ಮಾರನ ಪಡೆದವ ನಾರೇರಿ ಗೊಲಿದನೆ ನಾರಿಯು ಮೊರೆಯಿಡೆ ಸೀರೆಯ ಕರೆದವ ಜಾರನು ಎನಿಸುತ ಶೀರೆಯ ಚೋರನೆ 7 ಇಲ್ಲಿಹೆ ಅಲ್ಲಿಹೆ ಎಲ್ಲಾಕಡೆಯಿಹ ಎಲ್ಲರ ಒಳಗಿಹ ಎಲ್ಲರ ಹೊರಗಿಹ ಎಲ್ಲವ ಬಲ್ಲನು ಬಲ್ಲ ವರಿಲ್ಲವೆ 8 ಅಣುಕಿವÀ ಅಣುತಮ ಘನಕಿವ ಘನತಮ ಅಣು ಘನ ಮಾಡುವ ಘನ ಅಣುಮಾಡುವ ಅಣುವಲಿ ಅಡಗಿಪ ಘನವನು ಬಲ ಬಲ ತೃಣ ಸಹ ಚಲಿಸದು ಚಿನುಮಯ ನಿಲ್ಲದೆ 9 ಜಾಗರ ಸ್ವಪ್ನ ಸುಷುಪ್ತಿಗಳೆಲ್ಲವ ಆಗಿಸಿ ಕಾಯುವ ಯೋಗಸು ಭೋಕ್ತನು ಬೀಗರ ಮನೆಯಲಿ ಸಾಗಿಸಿ ಯಂಜಲ ತೇಗಿದ ತಿನ್ನುತ ಶಾಖವ ನಿಜಕರುಣಿ 10 ಲೋಕವ ಸೃಜಿಸುವ ಲೋಕವ ನಳಿಸುವ ಲೋಕನು ಪಾಲಕ ಲೋಕ ವಿಲಕ್ಷಣನೆ ನಾಕರ ನಾಯಕ ನಾಕಗತಿ ಪ್ರದ ಶೋಕವಿದೂರಗೆ ತಾಕಿತು ಕೊಡಲಿ ಬತ 11 ಎಲ್ಲಾ ನಾಮವು ಇವನದೆ ಸರಿಸರಿ ಎಲ್ಲಾ ರೂಪವು ಕೂಡ್ರವ ದಿವನಿಗೆ ಎಲ್ಲಾ ಚೇತನ ಜಡದಿಂ ಭಿನ್ನನು ಎಲ್ಲಾ ಕಾಲದಿ ಒಂದೇ ಸಮನಿಹ 12 ಎಲ್ಲಾ ರೂಪಗಳೊಂದೇ ಸಮ ಬತ ಎಲ್ಲಾ ರೂಪದನಂತ ಗುಣಂಗಳು ಎಲ್ಲಾ ರೂಪವು ನಿತ್ಯಸು ಪೂರ್ಣವು ಎಲ್ಲಾ ಮಹಿಮೆಯ ಯಾರು ಕಾಣರು 13 ಜೀವರ ಬಿಂಬನು ಜೀವನ ಸಹವಿಹ ಜೀವರಿ ಗುಣಿಸುವ ಸುಖ ದುಃಖಂಗಳ ಸಾರ ಸುಭೋಕ್ತನು ಜೀವರಿ ಗಲ್ಲವೆ ಕರ್ಮದ ಲೇಪವು 14 ಅಗಣಿತ ಮಹಿಮನು ನಗೆಮೊಗ ಶ್ರೀ ಕೃಷ್ಣವಿಠಲ ಪರಾತ್ಪರ ಸಿಗುವನು ಭಕ್ತಿಗೆ ಸರಿಮಿಗಿಲಿಲ್ಲವೆ ಬಗೆಯನೆ ದೋಷವ ಶರಣೆಂದವರ15
--------------
ಕೃಷ್ಣವಿಠಲದಾಸರು