ನಿಲಿಸಯ್ಯಾ ನಿಲಿಸೆನ್ನ ಮನವ ಶ್ರೀ ಹರಿಯೇ ನಿನ್ನಾ |
ಹೊಳೆವ ಚರಣದಲ್ಲಿ ನೆಲೆಗೊಂಬುವಂದದಿ ಪ
ಯರಳಿಯು ಘಂಟಾನಾದಕೆ ಬಲೆ ಹೋಗುವಂತೆ |
ಮರುಳಾಗಿ ತರಣಿಯರಾಳಾಪದಿ |
ಭರದಿಂ ದೀವಿಗೆ ಕಂಡು ಪತಂಗ ಮಡಿವಂತೆ |
ಹರಿದು ರೂಪ ವಿಷಯದಲಿ ಮುಗ್ಗುತಿಹುದೋ1
ಕರಿ ಅಂಗ ಸಂಗದೀ ಕುಣಿಯಾ ಬೀಳುವಂತೆ |
ಸ್ಪರುಶ ವಿಕ್ಷಯದಲಿ ಮೈಮರೆದು |
ಯರಗಿ ಮಾಂಸಕ ಗೋಣ ನೀವ ಮಚ್ಛದಂತೆ |
ನಿರುತ ಜಿವ್ಹಾಸ್ವಾದಕ ತೊಳಲುತಲಿಹುದೈಯ್ಯಾ2
ಪರಿಮಳಕಾಗಿ ಬ್ರಮರ ಸೆರೆ ಬಿದ್ದಂತೆ |
ಹರುಷ ಪಡುತ ಭೋಗ ದ್ರವ್ಯದಲಿ |
ತರುವರಿ ತನಲಿಂತು ಮಾಡಿ ವಿಷಯದಿ ಬಂದು |
ದುರಿತ ಮೊನೆಗೆಯನ್ನ ಗುರಿ ಮಾಡಿತಿಹುದೈಯ್ಯಾ3
ಐದು ಮೋರೆಯಲಂತು ಹರಿಗುಡದೆವೆ ಮತ್ತ |
ಐದು ಪರಿಯ ಕಾವಲಿಯ ನಿರಿಸೋ |
ಮಾಧವ ನಿಮ್ಮ ಸತ್ಕಥೆಗಳ ಶ್ರವಣಕ |
ಪಾದ ಧ್ಯಾನದಿ ಹಿಂಗದಂದದಿ ನಯನದಿ 4
ನಿನ್ನ ದಾಸರ ಸಂಗ ವನುದಿನ ದೇಹಕ |
ನಿನ್ನ ನಾಮಾಮೃತ ಜಿವ್ಹೆಯಲಿ |
ನಿನ್ನ ನಿರ್ಮಾಲ್ಯ ತುಳಸಿಯಾ ಫ್ರಾಣಿಸುವ ತಾ |
ಯನ್ನನುದ್ದರಿಸು ಮಹಿಪತಿ ಸುತ ಪ್ರಭುವೆ5