ಇಂದು ಸುದಿವಸ ನೋಡಿ ಕಂಡೆವು ಕಣ್ಣಾರೆ
ಚಂದವಾಗಿ ಗುರು ಪೂರ್ಣಮಾಡಿದ ಮನೋಹರ ಧ್ರುವ
ಕೇಳದಾ ಕೇಳಿದೆವು ಫೇಳಿಸುವದೆನ್ನೊಳಗೆ
ಹೇಳೇನೆಂದರೆ ಬಾರದು ಸುಳವು ಇನ್ನೊಬ್ಬರಿಗೆ
ತಾಳಮೃದಂಗ ಭೇರಿ ಭೋರಿಡುತ ಒಳ ಹೊರಗೆ
ತಿಳಿದೇನಂದರದೇ ನೋಡಿ ಉಲುವು ತಾ ತನ್ನೊಳಗೆ 1
ಕಾಣದ ಕಂಡೆವು ಖೂನ ತಾ ಕಣ್ಣಿನ ಕೊನೆಯೊಳಗೆ
ಪ್ರಾಣ ಪಾವನ್ನವಾಯಿತು ಪುಣ್ಯ ಪ್ರಭೆಯೊಳಗೆ
ಭಾನುಕೋಟಿತೇಜ ಧನ್ಯಗೈಸಿದ ಎನಗೆ
ಸ್ವಾನುಭವದ ಸುಖ ಎದುರಿಟ್ಟಿತು ಜಗದೊಳಗೆ 2
ನುಡಿಯು ಕೇಳಿದಂಥ ನುಡಿಗೇಳಿದೆವಿಂದು
ಕಡಿಗಾಯಿತು ನೋಡಿ ಹುಟ್ಟಿಬಾಯ ಜನ್ಮಸಂದು
ವಿಡಿದು ಗುರುಪಾದ ಜನ್ಮಸಾರ್ಥಕಾಯಿತಿಂದು
ಪಡೆದ ಮಹಿಪತಿ ನಿಜಾನಂದ ವಸ್ತುವಂದು 3