ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿ ತಾನಾಗಿ ಶ್ರೀರಾಘವೇಂದ್ರಯತಿ ಒಲಿದ ಪ ಪೋರತನದವನು ಎರೆಡು ತೆರೆಗಳಲ್ಲಿ ದೂರಾಗಿ ಮೊರೆಯು ಅಲ್ಲವೆಂದು ಕಾರುಣ್ಯದಿಂದ ತಮ್ಮಯ ಗುರುತುಗಳ ತೋರಿ ಧೀರ ತಾ ಕರವನು ಪಿಡಿದ ಬಳಿಕ 1 ಜಗದೊಳಗೆ ಪದಾರ್ಥಗಳು ಗುಣದಿ ಭುಂಜಿಸುವಂಗೆ ಅಗದಂಕರನು ತಾನು ಬಳಿಗೆ ಬಂದು ಬಗೆಬಗೆಯಿಂದಲಿ ಸುರಸ ಪದಾರ್ಥಗಳು ಸೊಗಸಾಗಿ ಉಣಿಸಲು ಚಿಂತೆಯುಂಟೆ2 ಪೂರ್ಣಜಲ ಹರಿವ ವಾಹಿನಿ ಕಂಡು ಬೆದರುವಗೆ ಕರ್ಣಧಾರನು ತಾನೆ ಬಂದು ನಿಂದು ತೂರ್ಣದಲಿ ಕರಪಿಡಿದು ಹರಿಗೋಲ ಒಳಗಿಟ್ಟು ಫೂರ್ಣಿಸಲು ಅವನಿಗೆ ಚಿಂತೆಯುಂಟೆ 3 ತನ್ನಯ ಹಿತವು ತಾ ವಿಚಾರಿಸಲವಂಗೆ ಚನ್ನಾಗಿ ಪರಮ ಗುರು ತಾನೆ ಬಂದು ಸನ್ಮಾರ್ಗವನು ತಾನೆ ಪೇಳುವೆನೆನಲು ಇನ್ನು ಆಯಾಸವುಂಟೆ ಅವನಿಗೆ 4 ಏಸು ಜನ್ಮದಲಿ ಅರ್ಚಿಸಿದೆನೊ ನಾ ಇನ್ನು ಪಾದ ಪದುಮ ಲೇಸಾಗಿ ಈ ಸುಕೃತದಿಂದೆನ್ನ ಹರಿದಾಸ ಈ ಸುಗುಣ ಗುರುರಾಯ ಎನಗೆ ಒಲಿದ 5
--------------
ವ್ಯಾಸತತ್ವಜ್ಞದಾಸರು