ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಂಭೋ ಶಂಕರ ಶೈಮಿನಿ ಪತಿಹರ |ಅಂಬಾವರನೆ ತ್ರಿಯಂಬಕ ಪಾಹೀ ||ಲಂಬೋದರ ಗುಹಜನಕ ಸದಾಶಿವ |ಸಾಂಬಮಹೇಶ ದಿಗಂಬರ ಪಾಹೀ 1ನೀಲಗ್ರೀವ ಬಿಲೇಶಯ ಭೂಷಣ |ಫಾಲಾನಮನ ತ್ರಿಶೂಲಿಯೇಪಾಹಿ||ಕಾಲಾಕಾ¯ ಕಪಾಲಧರನೆ ಗಣ- |ಜಾಲನಮಿತ ಗುಣಶೀಲನೆ ಪಾಹೀ 2ಮಂದಾಕಿನಿಧರ ಸುಂದರ ಶುಭಕರ |ಚಂದಿರಾ ಶೇಖರ | ಪಶುಪತೇ ಪಾಹೀ ||ಅಂಧಕರಿಪುಗೋವಿಂದದಾಸನ ಪ್ರಿಯ |ನಂದಿವಾಹನ ನಿನಗೊಂದಿಪೆ ಪಾಹೀ3
--------------
ಗೋವಿಂದದಾಸ