ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೋರಿಸೊ ತವರೂಪ ತೋಯಜ ನೇತ್ರ ಪ ಮಾರಜನಕ ಕರುಣಾರಸಪೂರ್ಣನೆ ನಾರಾಯಣ ಭವತಾರಕ ಮಮ ಸ್ವಾಮಿ ಅ.ಪ. ದಶರಥ ನಂದನ ವಸುಮತಿ ರಮಣ ತ್ರಿ ದಶವಂದಿತ ಚರಣ ಪಶುಪತಿಧನುಭೇದನ ವಸುಧಾಸುತೆರಮಣ ಋಷಿಪತ್ನಿ ಶಾಪಹರಣ ಅಸಮಾ ವಲ್ಕಲ ಚೀರವಸನಾ ಭೂಷಣಸ್ವಾಮಿ ಬಿಸಜಾಪ್ತನ ಸುತಗೊಲಿದವನಗ್ರಜ ನಸುವನು ತೊಲಗಿಸಿ ಅಸುನಾಥನ ಸುತ ಗೊಸೆದು ಬಿಸಜಭವ ಪದವಿಯ ಕರುಣಿಸಿ ವಿಷಧಿಯ ಬಂಧಿಸಿದಸಮ ಸಮರ್ಥ 1 ದಿನಮಣಿವಂಶ ಮಸ್ತಕಮಣಿಯೆಂದೆನಿಸಿ ಮುನಿ ಕೌಶಿಕನ ಯಜ್ಞಫಲವಾಗಿ ರಕ್ಷಿಸಿ ಅನಲಾಕ್ಷಧನು ಮುರಿದು ಮುನಿಪತ್ನಿಯನು ಪೊರೆದು ಜನಕಸುತೆಯ ಕರವನು ಪಿಡಿದ ಧೀರ ಜನಕನಾಜ್ಞೆಯಿಂ ವನವ ಪ್ರವೇಶಿಸಿ ಇನಸುತಗೊಲಿಯುತ ಅನಿಲಜನಿಂದಲಿ ಘನಸೇವೆಯ ಕೊಂಡನಿಮಿಷ ವೈರಿಯ ಹನನಗೈದ ಹೇ ಅನುಪಮ ಶೂರ2 ಲೀಲಾಮಾನುಷರೂಪ ಭೂಲಲನಾಧಿಪ ಫಾಲಾಕ್ಷವಿನುತ ವಿಶಾಲಸುಕೀರ್ತಿಯು ತಾ ಆಲಸ್ಯವಿಲ್ಲದೆ ವಿಶಾಲವನವ ಪೊಕ್ಕು ವಾಲಿಯ ಸಂಹರಿಸಿ ಪಾಲಿಸಿ ಸುಗ್ರೀವನ ಲೋಲಲೋಚನೆಯಿಹ ಮೂಲವ ತಿಳಿದು ಬಂ ದ್ಹೇಳಿದ ಪವನಜಗಾಲಿಂಗನವಿತ್ತು ಖೂಳ ದಶಾಸ್ಯನ ಕಾಲನೆಂದೆನಿಸಿದ ಶ್ರೀಲೋಲನೆ ಶ್ರೀ ಕರಿಗಿರೀಶನೆ3
--------------
ವರಾವಾಣಿರಾಮರಾಯದಾಸರು