ರಘುರಾಮಚಂದ್ರ ಬಾರೈ ಹರೆ ದಿವ್ಯ ರತ್ನಪೀಠಕೆ ಪ
ದೇವತಾಳಿ ನುತಿಯ ಕೇಳಿ ಭಾವದಲ್ಲಿ ಮುದವ ತಾಳಿ
ರಾವಣಾದಿ ದನುಜ ವೃಂದವ ಸೀಳಿ ಜಗವ ಪೊರೆದ ವಿಭುವೆ 1
ಇಂದು ಸುಂದರ ಫಾಲರಾಮ
ಇಂದು ವಂಶಜಲೋಲ ದಶರಥನಂದನಾಶ್ರಿತ ವತ್ಸಲ ವಿಭುವೆ 2
ಪಂಕಜ ಮಲ್ಲಿಕಾಕುಸುಮಾಳಿ ಭಾಸುರ
ಪುಲ್ಲ ಚಂಪಕ ಮಾಲಕ ರಂಜಿತ ಉಲ್ಲಸನ್ಮøದುವಾಣಿ ವಿಭುವೆ 3
ಭಕ್ತ ಹೃದಯ ಕುಮುದ ಚಂದ್ರ ಶಕ್ತಿವಿಜಿತ ರಾಕ್ಷಸೇಂದ್ರ
ಭುಕ್ತಿ ಮುಕ್ತಿದಾಯಕ ವಿಭುವೆ 4
ಮಾನವೇಂದ್ರ ಸುರೇಂದ್ರ ವಂದಿತ ಸೂನ ಶರ ಸಹಸ್ರ ಸುಂದರ
ಚಕೋರ ಧೇನುನಗರ ಶ್ರೀರಾಮ ವಿಭುವೆ5