ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರತಿದೇವಿಯೆ ನಿನ್ನನು ಭಾವದಲಿ ಭಜಿಸುವೆ ಪ್ರಬಲಿಸಮ್ಮಾ ಪ ಮಂದ ಬುದ್ದಿಯಿಂದನಾ ಬಲುಮಾನ ಹೀನನಾಗಿ ಬಾಳಿದೆ ಕೋಮಾಲಾಂಗಿಯೆ 1 ಹತ್ತು ಎಂಟು ಅಂತರದಿ ಜಿಹ್ವದಿ ತಿಳಿವಂತೆನ್ನ ಮಾಡಮ್ಮಾ ಸತ್ಯ ವಾಕ್ಯ ಪ್ರವೀಣೆ ನೀನು ಸಾರುವೆನು ನಾನು 2 ಫಾಲನೇತ್ರಾದಿಗಳಿಲ್ಲಾ ಪರಮ ಮಂಗಳತೋರುವಿ ಬಾಲರಾಮ ಪದಾಬ್ಜ ಭೃಂಗನ ಪಟ್ಟದರಸಿಯೆ 3 ಭಕ್ತಿಯಲಿ ನೀನಿತ್ತರುಂಟು ಭಾದ್ಯರಿದಕಾರು ಕಾಣೆನು ಮುಕ್ತಿ ಮಾರ್ಗವ ತೋರಿಸೆನ್ನನು ಮುಕ್ತನೆನಿಸಮ್ಮಾ 4 ಭೂಮಿಗಧಿಕ ಹೆನ್ನೆಪುರ ಹೆನ್ನೆ ವಿಠಲನ ಪಾದಪದ್ಮವ ಪ್ರೇಮದಿಂದಲಿ ಹೃದಯದಲಿ ಇಟ್ಟು ಪ್ರೀತಿ ತೋರಮ್ಮಾ 5
--------------
ಹೆನ್ನೆರಂಗದಾಸರು