ಪಾಲಿಸೋ ಹರಿ ಪಾಲಿಸೋ
ಫಾಲನಯನಸಖ ಭಕ್ತಾಂತರಾತ್ಮಕ ಪ
ಪಾಲಿಸು ಫಲ ಸುಪ್ರದಾತ ಮೊರೆ
ಪಾಲಿಸು ಸುಜನನ್ನುತ ಖರೆ
ಪಾಲಿಸು ಸತತ ವಿಖ್ಯಾತ ದೊರೆ
ಪಾಲಿಸು ನುತರ ಸಂಪ್ರೀತ ಆಹ
ಪಾಲ ಪಾವನಗಾತ್ರ ಪಾಲತ್ರಿಜಗಸ್ತೋತ್ರ
ಪಾಲಿಸು ಕೃಪಾನೇತ್ರ ಪಾಲಪಾವನಯಾತ್ರ 1
ಕೊರಳ ಕೌಸ್ತುಭಮಣಿಮಾಲ ಬಹು
ಕಾಲ ಮಹ
ಕರುಣದೊರದಿ ಸುರಜಾಲ ಬಹು
ಪ್ರಳಯ ಗೆಲಿದಿ ತೋರಿ ಲೀಲಾ ಆಹ
ಹರಣಜನರಮರಣ ಕರುಣ ಭರಣಪೂರ್ಣ
ಶರಣಜನರ ಪ್ರಾಣ ಮರಣ ಗೆಲಿಸುವ ತ್ರಾಣ 2
ನಿತ್ಯ ನಿಮ್ಮಯ ನಿಜಭಕ್ತಿ ನೀಡು
ನಿತ್ಯ ನಿಮ್ಮಯ ನಿಜಸ್ತುತಿ ನೀಡು
ನಿತ್ಯ ನಿಮ್ಮಯ ನಿಜಮತಿ ನೀಡು
ನಿತ್ಯ ನಿರ್ಮಲ ನಿಜಮುಕ್ತಿ ಆಹ
ನಿತ್ಯನಿರ್ಮಲ ರಾಮ ನಿತ್ಯನಿರ್ಮಲ ನಿಮ್ಮ
ನಿತ್ಯನಿರ್ಮಲ ಪ್ರೇಮ ನಿತ್ಯನಿರ್ಮಲ ನಾಮ 3