ನಾಚಿಕಿಲ್ಲೆ ಮನವೆ ಲೋಚಿ ಬಿಟ್ಟ ದನವೆ
ಊಚ ನೀಚಕಾಗಿ ಹೊಡೆದಾಡುದಿನ್ನು ಗುಣವೆ 1
ಹೇಸಿಕಿಲ್ಲೆಂಬುದು ವಿಷಯದೊಳು ನಿಂದು
ವ್ಯಸನಕಾಗಿ ಫಸಿಗೆ ಬೀಳುವದೆ ನಿನ್ನ ಕುಂದು 2
ಜನಿಸಿ ಯೋನಿಯಮುಖ ಏನು ಕಂಡ್ಯೊ ಸುಖ
ಶ್ವಾನಸೂಕರದ ಜನ್ಮ ತಾಳಿದಿ ಅನೇಕ 3
ಭವ ಬವಣಿಗೆ
ಬುದ್ಧಿ ಇದೆ ಶರಣುಹೋಗು ಸದ್ಗುರುವಿಗೆ 4
ಪಿಡಿದು ಗುರುಪಾದ ಪಡಿಯೊ ನಿಜಬೋಧ
ಮೂಢ ಮಹಿಪತಿ ನಿನಗಿದೆ ಸುಪ್ರಸಾದ 5