ಕರುಣಾಕರ ಪರಮೇಶ್ವರ
ಗುರುತಮ ಕಲ್ಯಾಣಧಾಮ ಪ.
ಸುರುಚಿರ ಪೀತಾಂಬರಧರ
ನರಕೇಸರಿ ಕರಿವರವರದ ನಮೋ ನಮಃ ಅ.ಪ.
ಮಂದರಧರ ಮಧುಸೂದನ
ವೃಂದಾವನಸಂಚರಣ
ಚಂದ್ರಕೋಟಿಸದೃಶಾನನ
ವಂದನೀಯ ನಂದಕುಮಾರವ್ರಜೇಶ್ವರ 1
ಭುಜಗಶಯನ ಭೂತಭಾವನ
ಭಜಕಜನೋದ್ಧರಣನಿಪುಣ
ಕುಜನಜನಾರಣ್ಯದಹನ
ವಾಹನ ಮೋಹನ2
ಮಾತರಿಶ್ವಸಖ ಲೋಕೈಕ
ನಾಥ ಲಕ್ಷ್ಮೀನಾರಾಯಣ
ವೀತಭಯ ವಿಧಾತ ರುಕ್ಮಿಣೀ-
ಪ್ರೀತ ತ್ರಿಗುಣಾತೀತನೆ ಫಲ್ಗುಣಸೂತನೆ 3