ಮಾನವ ನಿನ್ನಾ |
ಪಡೆದು ಕೊ ಸದ್ಗತಿಯನು ಪ
ತಡಿಯದೇ ಸದ್ಗುರು ಅಡಿಗಳ ಪೂಜಿಸಿ |
ಒಡನೆ ಭವಾಂಭವಾಂಬುಧಿ ಥಡಿಯವ ಸಾರೆಲೋ ಅ.ಪ
ಪತ್ರೇಂದ್ರವಾಹನನು | ಮಣಿಗಣ
ಸೂತ್ರದಂದದಿ ಜೀವನು |
ಚಿತ್ರ ವಿಚಿತ್ರದಲಿ ಅಡಿಸುವ | ಗು |
ಣತ್ರಯ ವಾದಲಿ |
ಕಳತ್ರ ಸುಮಿತ್ರ ಸಮಂಧ |
ಧತ್ರಿಲಿ ಮಾಯ ಚರಿತ್ರವಿದೆಂದು 1
ತಾನಾರು ತನುವಾರದು ತನುವಿನ |
ತಾನೀ ಸಂಮಂಧವಾರದು |
ಜ್ಞಾನಿಗಳನು ಮತದಿ ತಿಳಿದು ನೋಡು |
ಸ್ವಾನುಭವದ ಬೋಧದೀ |
ಹಾನಿ ಯಶ _ ಸುಖ ಮಾನಾಪಮಾನವು |
ಮಾನವರಿಗೆ ಪ್ರಾಚೀನ ಫಲೆಂದು 2
ಹಿಂದಾದ ನೆನಹಿಸದೇ ವಾಸನೆಗಳ |
ಮುಂದೇನು ಕಾಮಿಸದೇ |
ಕ |
ನಸಿನಾನಂದ ವಿದೆಂದು ಭಾವಿಸೀ |
ತಂದೆ ಮಹಿಪತಿ ಕಂದಗ ಸಾರಿದ |
ದ್ವಂದ್ವಗೆಲಿದು ಗೋವಿಂದ ನೆನೆಯುತ 3