ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಜಿ ವದನ ವಿಠಲ ಕಾಪಾಡೊ ಇವಳಾ ಪ ತೈಜಸೀ ರೂಪದಲಿ | ಆಶಿಷವನಿತ್ತೇ ಅ.ಪ. ಕಾಮಿತಾರ್ಥದನೆ ಸ | ತ್ಕಾಮ ಫಲಿಸುತಲಿವಳಕಾಮ ಜನಕನೆ ದೇವ | ಕಾಪಾಡೊ ಹರಿಯೇ |ಕಾಮ ಮದ ಮಾತ್ಸರ್ಯ | ಶತ್ರು ವರ್ಗವ ಕಡಿದುಕಾಮಿನಿಯ ಕೈ ಪಿಡಿದು | ಕಾಪಾಡೊ ಹರಿಯೇ 1 ಜ್ಞಾನಾನು ಸಂಧಾನ | ಪಾಲಿಸುತಲಿವಳೀಗೆಪ್ರಾಣೇಶ ತವನಾಮ | ಸತತ ಸ್ಮರಿಸೂವಾ |ಜಾಣೆ ಎಂದೆನಿಸಿ ಸಂ | ಧಾನ ಸುಖವೀಯೊ ಹರಿಮಾನನಿಧಿ ಮಧ್ವಾಖ್ಯ | ಪ್ರಾಣಸನ್ನುತನೇ 2 ನೀವೊಲಿಯದಿನ್ನಿಲ್ಲ | ದೇವ ದೇವನೆ ಹರಿಯೆಗೋವತ್ಸದನಿ ಕೇಳಿ | ಆವು ಬರುವಂತೇ |ಧಾವಿಸೀ ಬಾರೋ ಗುರು | ಗೋವಿಂದ ವಿಠ್ಠಲನೆಭಾವುಕಳ ಪೊರೆಯಲ್ಕೆ | ದೇವ ಹಯವದನಾ 3
--------------
ಗುರುಗೋವಿಂದವಿಠಲರು