ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕಾದಶಿ ನಿರ್ಣಯ ಅನಲು [ಸಮನೆ] ಮನೆಗೆ ಪೇಳಬಂದ ಅನಾಥಬಂಧು ಹಯವದನ ಗೋವಿಂದ ಪ. ತನ್ನ ನಂಬಿದವರ ತಾಪತ್ರಯವಳಿದು ಉನ್ನಂತ ಪದವೀವ ದಿನತ್ರಯವನ್ನು 1 ವೃದ್ಧಿಮಾತ್ರ ಅರುಣೋದಯದ ಕೆಳಗೆ [ಶುದ್ಧಿದಂ] ಘಳಿಗೆ ಸಾಕುಯೆಂದು 2 ಅತಿವೃದ್ಧಿ ಒಂದುಘಳಿಗೆಯ ಕೆಳಗೆ ವಿಂ ಶತಿ [ಫಣಫಲ] ದೊಳಗೆ [ಶುದ್ಧಿ] ಬೇಕೆಂದು 3 ತಿಥಿ ವೃದ್ಧಿಆದಾಗೆ ಹತ್ತು [ಫಣಪಲ] ತಿಥಿಕ್ಷಯದಲ್ಲಿ ಅದರೊಳು [ಶುದ್ಧಿ] ಬೇಕೆಂದು 4 ಇಂದು ದಶಮಿ ಶಾಖವ್ರತವ ಮಾಡಿ ನೀವು ಒಂದು ಬಾರಿ ಭೋಜನ ಮಾಡಿರೊಯೆಂದು 5 ತಾಂಬೂಲಚರ್ವಣ ಸಲ್ಲ ಸ್ತ್ರೀಸಂಗ ಹಂಬಲವನ್ನು ನೀವು ಬಿಡಿರಿಯೆಂದು 6 ನಾಳೆ ಏಕಾದಶೀ ಉಪವಾಸ ಜಾಗರ ಆಲಸ್ಯ ಮಾಡದೆ ಆಯತಾಕ್ಷಗೆಯೆಂದು 7 ಫಲಹಾರವು ಸಲ್ಲ ಭೋಜನವು ಸಲ್ಲದು ಜಲಪಾನ ಸಲ್ಲ ಮೆಲಸಲ್ಲದೆಂದು 8 ನಾಲ್ಕುಹೊತ್ತಿನ ಆಹಾರವ ಬಿಡುವುದು ಹದಿ ಜಾಗರ ಮಾಡಿರೊಯೆಂದು 9 ಪೇಳ ಅರ್ಧದ್ವಾದಶಿಬಂದಾಗ ನೀವೆಲ್ಲ ಒಲುಮೆಯಿಂದ ಪಾರಣೆಯ ಮಾಡಿರೊಯೆಂದು10 ಇಂತು ತಿಥಿತ್ರಯ ಮಾಡುವ ಜನರನ್ನು ಸಂತತ ಪೊರೆವ ಶ್ರೀಕಾಂತ ಹಯವದನ 11
--------------
ವಾದಿರಾಜ
ಫಲಹಾರವ ಮಾಡೋ ಪದುಮಲೋಚನನೆ| ಒಲಿದು ಶ್ರೀ ಭೂದೇವಿ ಅರಸಿಯರೊಡನೆ ಪ ಕದಳೀ ಕಪಿಥ್ಥಶರ್ಕರ ಮೋದದಿಂದಲೀ| ಒದಗಿ ಬೆಂಡುಖರ್ಜೂರಿ ಘೃತಮೋಪ್ತದಿಂದಲಿ1 ಕಳೆದ ಸಿಗುರಿಯಾ ಕಬ್ಬಿನ ಪೇರು ಬದರಿಯಾ| ಬಲಿದ ಪರಿಮಳ ರುಚಿಗಳ ಒಪ್ಪನಿಂದಾ 2 ವಸುಧೆಯೊಳುಳ್ಳ ಸಕಲ ಫಲಸಾರವಾ| ಬಿಸಿಯಾದ ಪಲ್ಗೆನೆಯ ಮಧುಸಹಿತಾ 3 ಗುರುಮಹೀಪತಿಸ್ವಾಮಿ ಶರಣ ರಕ್ಷಕನೇಮಿ| ಸುರರಿಗಮೃತವೆರೆದಾನಂದ ಕರದಲಿ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಫಲಹಾರವನೆ ಮಾಡೊ ಪರಮಪುರುಷನೆ |ಲಲನೆಲಕ್ಷ್ಮೀಸಹ ಸಕಲ ಸುರರೊಡೆಯ.........ಪ.ಕಬ್ಬು ಕದಳಿಫಲ ಕೊಬ್ಬರಿ ಖರ್ಜೂರ |ಕೊಬ್ಬಿದ ದ್ರಾಕ್ಷಿ ಹಲಸು ತೆಂಗು ||ಶುಭ್ರ ಸಕ್ಕರೆ ಲಿಂಬೆ ಮಾವು ಕಿತ್ತಳೆಗಳು |ಇಬ್ಬದಿಯಲಿ ಇಟ್ಟಶೇಷಫಲಂಗಳ.........1ನೆನೆಗಡಲಿಬೇಳೆ ಲಡ್ಡಿಗೆ ಮೂಗದಾಳು |ಪಾನಕ ಶುಂಠಿಬೆಲ್ಲ ಯಾಲಕ್ಕಿಯು ||ಗೊನೆ ಬಾಳೆಹಣ್ಣು ಘೃತವು ನೊರೆಹಾಲು |ಕನಕಪಾತ್ರೆಯೊಳಿಟ್ಟು ಸಕಲ ಪದಾರ್ಥವ.....2ಧ್ಯಾನ ಪೂರ್ವಕದಿಂದ ಮಾನಸ ಪೂಜೆಯು |ಪನ್ನೀರನೆ ಭಕುತ ವತ್ಸಲಗೆ ||ಜಾನಕಿರಮಣಗೆ ಷೋಡಶೋಪಚಾರ |ದಾನವಾಂತಕಸಿರಿಪುರಂದರವಿಠಲ ............3
--------------
ಪುರಂದರದಾಸರು