ಮನುಜಶರೀರವು ವರವೊ ದುರ್ಲಭವೊ ಪ
ಭವಸಾಗರವನು ದಾಂಟಲು ನೌಕೆಯಿದೊ
ಭವಭಾಧೆಯ ನೀಗಲು ಇದು ಸಾಧನವೊ
ಪಾವನಸ್ವರೂಪಜ್ಞಾನವನರಿಯಲು
ದೇವನೆ ತಾನೆನಿಸುವನೊ ಆ ನರನು 1
ತಿಳಿ ನೀನೀಗಲೆ ನಾನಾರೆಂಬುದ ಮನುಜಾ
ಅಳಿವೀ ದೇಹದೊಳೇ ತಿಳಿಯಲುಬಹುದಿದನಾ
ಉಳಿದ ದೇಹಗಳು ಹಲವಾರಿರುತಿರೆ
ಫಲವೇನೈ ತಿಳಿವಿರದೇ ತಿಳಿ ಭರದೇ 2
ಪಾಪಿ ಜನ್ಮವು ಎಂದು ಶಪಿಸಲು ಬೇಡಾ
ತಾಪನೀಗಲು ಇದೇ ದಾರಿಯೈ ನೋಡಾ
ಭವ ಕಡಿಯೇ 3