ಬೇಡುವೆನೊಂದು ಬೇಡತಕ್ಕುದು ಎಂದು
ಬೇಡ ವರಗಳೆನಗೆ ನೀಡು ಅದನೊಂದ ಪ
ಬೇಡ ಸುಖವು ಕೃಷ್ಣ ಬೇಡ ಫಲವಿಫಲ
ಬೇಡ ಮಾನಾಪಮಾನ ಬೇಡ ಜಯಾಪಜಯ ಅ.ಪ
ನಿದ್ರೆಸುಖವು ಬೇಡ ಭದ್ರಭೋಜನ ಬೇಡ
ತಿದ್ದಿದ ವಾಸ್ತುವುಬೇಡ ಮಧುರವು ಬೇಡ
ಸದನ ವಿತ್ತವು ಬೇಡ
ಹೃದಯದಿ ರಾಮನಾಮ ಪರಿಹರಿಸಲು ಬೇಡ 1
ನರಕ ಬಾಧೆಯ ಪರಿಹರಿಸಲು ಬೇಡ
ದುರಿತ ಸಂತತಿಗಳ ತೊರೆಯಿಸ ಬೇಡ
ಸುರಲೋಕ ಸಾಮ್ರಾಜ್ಯ ವರವನೀಯಲು ಬೇಡ
ನಿರುತ ನಿನ್ನಯ ಪದ್ಮ | ಚರಣವ ತೋರೆಂದು2
ಮಾವಿನಕೆರೆರಂಗ ಶ್ರೀವನಿತಾ ಸಂಗ
ಭಾವಜಪಿತರಂಗ ಗರುಡ ತುರಂಗ
ಭಾವನೆಗೈದು ಯೆನ್ನ ಸರ್ವಜನ್ಮದೆ ನಿನ್ನ
ದಿವ್ಯನಾಮವ ಭಜನೆಗೈವ ಬುದ್ಧಿಯು ಮಾತ್ರ 3
ನೀ ಮರೆಯದಿರಯ್ಯ ನಾಮರೆಯುವನಯ್ಯ
ಕಾಮಿತವೊಂದಿದ ನೀಡೊ ಮುಕುಂದ
ಸೋಮಧರ ವಂದಿತ ರಾಮದಾಸಾರ್ಚಿತ
ಭೀಮವಿಕ್ರಮರೂಪ ಅಮಿತಕಲಾಪಾ 4