ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಧವ ಮಾಯ ಜಾಲಗಳ್ ಜಾಣÀ ನೀನೆಲೈ ಮಧುರ ನುಡಿಯೊಳು ಮಾನವಳಿದ ಮೇಲ್ ಪ್ರಾಣವೇತಕೆ ಕಾಣಬಂದಿತು ನಿನ್ನ ಕಪಟವು 1 ಶೋಕ ಕಾರಣವರಿಯದಂತೆ ನೀ ನೇಕೆ ಪೇಳುವೆ ಬರಿದೆ ಎನ್ನನು ಸಾಕು ಸಾಕು ಈ ಸರಸವಾಕ್ಕುಗಳ್ ಶೋಕವಹ್ನಿಗೆ ಆಜ್ಯ ಸುರಿವರೆ 2 ಭಾಮೆ ಕೃಷ್ಣನ ಪ್ರೇಮ ಪುತ್ಥಳಿ ಸಾಮ್ಯರಹಿತವೀ ಸ್ನೇಹವೆನ್ನುತ ಭೂಮಿಯೊಳ್ ಜನ ಪೊಗಳುತ್ತಿದ್ದರು ಈ ಮಹಾಭ್ರಮೆ ಪೋಯಿತೀಗಲೆ 3 ಚಾರುನುಡಿಗಳಾಪಾರವೆನ್ನೊಳು ಸಾರ ಪ್ರೇಮವು ರುಕ್ಮಿಣಿಯೊಳು ಪಾರಿಜಾತದ ಪುಷ್ಪವವಳಿಗೆ ನೀರಸೋಕ್ತಿಗಳೆನ್ನ ಪಾಲಿಗೆ 4 ಅಮರ ಮುನಿಪನು ನಿನ್ನ ಸಮುಖದೊಳ್ ಅಮಿತವಾಗಿ ತಾ ಸ್ತುತಿಸೆ ಭೈಷ್ಮಿಯ ಕುಮತಿಯಿಂದ ತಾನೆನ್ನ ತೆಗಳಲು ಅಮಮಯೆಂದೆಯಾ ಅಪ್ರಮೇಯನೆ 5 ಕುಸುಮ ಮಾಲೆಯು ಉರಗನಾದೊಡೆ ಮಾಳ್ಪುದೇನು ಶರದ ಚಂದ್ರನ ಕಿರಣ ತಪಿಪೊಡೆ ಹಿರಿದು ಕರ್ಮವ ಫಲವಿದೆಲ್ಲವೇ 6 ಕರಿಗಿರೀಶನ ಚಿತ್ತವೀಪರಿ ಇರಲು ಸುಮ್ಮನೆ ಕೊರಗಲೇತಕೆ ಸರುವ ಸಂಗವ ತೊರೆದು ತಪದೊಳು ನಿರತಳಾಗುವೆ ನೀರಜಾಕ್ಷ ಕೇಳ್ 7
--------------
ವರಾವಾಣಿರಾಮರಾಯದಾಸರು