ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋವಿಂದ ವಿಠಲ ನಿನ್ನ ವಂದಿಸುವೆ ಸ್ವಾಮಿನೀ ಒಲಿದು ರಕ್ಷಿಸುವುದು ಜೀವಿ ಇವ ಬಹುಕಾಲಸಾವ ಸಾವ ನಿನ್ನ ಸೇವೆಯೊಳಗೆ ಇಟ್ಟು ಕಾವುದು ನಿರುತ ಪ. ಆವ ಈ ಯುಗದಲ್ಲಿ ನಿನ್ನ ವಿಷಯರಾಗಿಈವ ಸುಜನರು ಸ್ವಲ್ಪರು ತಾ ವ್ಯಾಪಿಸಿ ಇಹರುಅಸುರರೆ ಬಹುಳಾಗಿ ಆವದವಸ್ಥೆಗಳಲಿನೀ ವರವನು ಕಲಿಗೆ ಇತ್ತ ಕಾರಣ ಉಪಜೀವರ ವ್ಯಾಪಾರಈ ವಿಧದಲಿ ತಳೆದು ನಿನ್ನ ಹುಡುಕುತಲಿನ್ನುಜೀವಿ ಸಾತ್ವಿಕನು ಮೊರೆಯಿಡಲು ಬಿನ್ನಯಿಸಿದೆನೊ 1 ಏನು ಸಾಧನವನು ಖೂಳವನು ಕಂಡಿನ್ನುನೀನು ವಂದಿಸಿವೆಂದರೆ ಜ್ಞಾನಭಕುತಿ ಉಳ್ಳಜ್ಞಾನಿಗಳಲಿವಗೆ ನಾನು ಕಂಡೆನು ಭಕುತಿಯಕ್ಷೋಣಿಯಲಿ ಭಕುತಿ ನಿನ್ನಲಿ ಪುಟ್ಟಲಿಬಹುದುಜ್ಞಾನಿಗಳ ದುರ್ಲಭ ನೀನು ಒಲಿವುವ ಅವಗೆನಾನವರಲಿ ಭಕುತೀವೆ ನಾನಾಸಾಧನ ಫಲವಿದೆ ನೋಡಾ 2 ಪ್ರಾರ್ಥಿಸುವೆ ನಾ ನಿನ್ನ ಪ್ರೇರಣೆಯ ಅನುಸಾರಕೀರ್ತಿ ನಿನ್ನದು ಜಗದೊಳು ಪಾತ್ರ ಇವನೆಂದುನಿನ್ನ ಚಿತ್ತದಲಿ ಇತ್ತೆ ಸಾರ್ಥಕನ ಮಾಡು ಚೆಂ ಸ್ವಾ ?ಕೀರ್ತನೆಯ ಮಾಡಿಸು ನಿನ್ನ ಪರವಾಗಿ ನಿಜಸ್ಫೂರ್ತಿಸಖರಂಗ ಗೋಪಾಲವಿಠಲ ಶ್ರುತಿಶಾಸ್ತ್ರಾರ್ಥವನುಸಾರ ಪ್ರಾಪ್ತಿ ನೀನಾಗಿವಗೆ3
--------------
ಗೋಪಾಲದಾಸರು
ಬರಿದೆ ದಣಿಯಬೇಡಿ | ಬಯಲ ಸಾಧನ ಕೂಡಿ | ನೆರೆ ಮಾಡಿ ಸಾಧು ಸಂತರಾ | ದಯವಂತರಾ ಪ ಏನು ಓದಿದರೇನು | ಏನು ಕೇಳಿದರೇನು | ಜ್ಞಾನಿಗಳೊಡನಾಡದೇ | ಅನುಭವವಾಗುದೇ 1 ಬುಡದಲಿ ಫಲವಿದೆ | ತುದಿಮರನೇರುವರೇ | ಬಿಡು ಬಿಡು ನಾನಾ ಸಾಯಸಾ | ಭ್ರಾಂತಿ ವೇಷಾ 2 ಗುರು ಮಹಿಪತಿ ನುಡಿ | ಸಾರಿದ ನಂದ ನೋಡಿ | ಮರೆಯದೆ ಮಾಡಿ ಸಾಧನಾ | ಹರುಷ ನಿಧಾನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಧವ ಮಾಯ ಜಾಲಗಳ್ ಜಾಣÀ ನೀನೆಲೈ ಮಧುರ ನುಡಿಯೊಳು ಮಾನವಳಿದ ಮೇಲ್ ಪ್ರಾಣವೇತಕೆ ಕಾಣಬಂದಿತು ನಿನ್ನ ಕಪಟವು 1 ಶೋಕ ಕಾರಣವರಿಯದಂತೆ ನೀ ನೇಕೆ ಪೇಳುವೆ ಬರಿದೆ ಎನ್ನನು ಸಾಕು ಸಾಕು ಈ ಸರಸವಾಕ್ಕುಗಳ್ ಶೋಕವಹ್ನಿಗೆ ಆಜ್ಯ ಸುರಿವರೆ 2 ಭಾಮೆ ಕೃಷ್ಣನ ಪ್ರೇಮ ಪುತ್ಥಳಿ ಸಾಮ್ಯರಹಿತವೀ ಸ್ನೇಹವೆನ್ನುತ ಭೂಮಿಯೊಳ್ ಜನ ಪೊಗಳುತ್ತಿದ್ದರು ಈ ಮಹಾಭ್ರಮೆ ಪೋಯಿತೀಗಲೆ 3 ಚಾರುನುಡಿಗಳಾಪಾರವೆನ್ನೊಳು ಸಾರ ಪ್ರೇಮವು ರುಕ್ಮಿಣಿಯೊಳು ಪಾರಿಜಾತದ ಪುಷ್ಪವವಳಿಗೆ ನೀರಸೋಕ್ತಿಗಳೆನ್ನ ಪಾಲಿಗೆ 4 ಅಮರ ಮುನಿಪನು ನಿನ್ನ ಸಮುಖದೊಳ್ ಅಮಿತವಾಗಿ ತಾ ಸ್ತುತಿಸೆ ಭೈಷ್ಮಿಯ ಕುಮತಿಯಿಂದ ತಾನೆನ್ನ ತೆಗಳಲು ಅಮಮಯೆಂದೆಯಾ ಅಪ್ರಮೇಯನೆ 5 ಕುಸುಮ ಮಾಲೆಯು ಉರಗನಾದೊಡೆ ಮಾಳ್ಪುದೇನು ಶರದ ಚಂದ್ರನ ಕಿರಣ ತಪಿಪೊಡೆ ಹಿರಿದು ಕರ್ಮವ ಫಲವಿದೆಲ್ಲವೇ 6 ಕರಿಗಿರೀಶನ ಚಿತ್ತವೀಪರಿ ಇರಲು ಸುಮ್ಮನೆ ಕೊರಗಲೇತಕೆ ಸರುವ ಸಂಗವ ತೊರೆದು ತಪದೊಳು ನಿರತಳಾಗುವೆ ನೀರಜಾಕ್ಷ ಕೇಳ್ 7
--------------
ವರಾವಾಣಿರಾಮರಾಯದಾಸರು