ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಳಾದಿ ರಾಗ :ಸಾರಂಗ ಧ್ರುವತಾಳ ಬಿನ್ನಪವ ಮಾಡುವೆ ಯಜ್ಞ ಶ್ರೀನಿವಾಸ ನಿನ್ನ ಶರಣಗೆ ಹಲವು ಹಂಬಲ ಸಲ್ಲ ಇನ್ನು ತಾನೊಮೊಮ್ಮೆ ಬಯಸಿದೇ ಭಕುತಿಗೆ ಅನ್ಯಥಾವಾಗದಂತೆ ಬಯಸಿಕೊಳಲಿ ಮನ ಚಿನ್ನರ್ಗೆ ಫಲವಿತ್ತೆ ಓದು ಪೇಳುವ ತೆರ ಚನ್ನಾಗಿ ನೀನೆವೇ ಫಲವನ್ನು ಒಲಿದಿತ್ತ ವಾಕು ಆದರಿಸೊ ವಾಸುದೇವವಿಠಲ 1 ಮಟ್ಟತಾಳ ತೋಂಡರ ಮಾತುಗಳ ಪುಸಿಗೊಳಿಸಲಿ ಬೇಡ ದಿಂಡೇರ ಕೈಯಿಂದ ನೋಯಗೊಳಿಸದಿರೊ ಅಂಡಜವಾಹನ ಬಿರುದು ನಿನ್ನದು ನೋಡು ಕೊಂಡಾಡುವೆ ವಾಸುದೇವವಿಠಲರೇಯ ತೋಂಡರ ಮಾತುಗಳ ಪುಸಿಗೊಳಿಸಲಿ ಬೇಡ 2 ತ್ರಿವಿಡಿ ತಾಳ ಆವಾವ ಆಶ್ರಮವನ್ನು ಒಲಿದಿತ್ತು ನೀನೇವೆ ಆವಾವ ಬಗೆಯಲ್ಲಿ ಸಾಧನ ಮಾಡಿಸೊ ಆವಾವ ಬಗೆಯಲ್ಲಿ ಬಲ್ಲ ಸರ್ವಜ್ಞನೆ ಆವಾವ ವಿಧದಿಂದ ಬಿನ್ನೈಪುದೇನೆಲೊ ಕಾವ ಕರುಣಿ ವಾಸುದೇವವಿಠಲರೇಯಾ ಆವಾವ ಬಗೆಗಳ ಬಿನ್ನೈಪುದೇನಯ್ಯಾ 3 ಅಟ್ಟತಾಳ ಕೊಡಗೈಯ್ಯ ದೊರೆ ಎಂದು ನಂಬಿಲ್ಲಿಗೆ ಬಂದ ಬಡನಡವಳ ನೀನು ಕಡೆಗೆ ನೋಡುವರೇನೊ ತೊಡರುಗಳಿದ್ದರು ಬಿಡಿಸುವ ಬಗೆ ಬಲ್ಲ್ಯೋ ತಡೆಕೊಡುವ ದೋಷ ಒಡೆಯ ನಿನ್ನೆದುರಿಗೆ ಅಡರಿ ನಿಲ್ಲುವದುಂಟೆ ಆವಾವ ಕಾಲಕ್ಕೆ ಪೊಡವಿಯ ತಳದಲ್ಲಿ ಪುಟ್ಟಿ ಸಾಧನಗಳು ಪಡಿಯಲಿಬೇಕೆಂಬ ಭಕುತ ಜನರುಗಳು ಕಡಿಮೇನೊ ಅವರೊಶ ಮಾಡಿಸೊ ಭಕ್ತರ ಬಿಡಿಯ ಬಿರುದಿನ ವಾಸುದೇವವಿಟ್ಠಲ 4 ಆದಿತಾಳ ಒಂದೊಂದು ಕೊಡಲು ಮತ್ತೊಂದು ಕೊಡಲಿ ಎಂದು ಸಂದಣಿಸುತಲಿವೆ ವಿಷಯಗಳೊಂದು ತಂದೆ ತಡಮಾಡಬೇಡವೊ ಅದರಿಂದ ಒಂದೆ ಸಾಧನ ಬಹಳಾಗುವದೊ ಇಂದಿರೇಶ ಬಯಸಿದೆ ನಿನ್ನಲ್ಲಿ ಬಂದು ಒದಗಿಸೊ ವಾಸುದೇವವಿಠಲ 5 ಜತೆ ಕರುಣಾಳು ಸ್ವಾತಂತ್ರ ವಾಸುದೇವವಿಠಲ ಸರ್ವಜ್ಞ ನಿನಗೆ ಮೊರೆ ಇಡೊದಿದೆ ಚಿತ್ರ 6
--------------
ವ್ಯಾಸತತ್ವಜ್ಞದಾಸರು