ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರೆ ಪುರಂದರದಾಸರು ಲೇಸಾಗಿ ಎನಗೆ ಸುಮಾರ್ಗವನು ತೋರಿದರು ಪ ಅತಿ ಮುಗ್ಧನಾಗಿ ದುರುಳರಾ ದುರಾಚಾರದಲ್ಲಿ ಮತಿಗೆಟ್ಟು ಮಹಿಯೊಳಗೆ ತಿರುಗುತಿರಲೂ ಅತಿ ದಯಾಪರರಾಗಿ ತನ್ನವನಿವನೆಂದು ಹಿತದಲ್ಲಿ ಪೊರೆದು ಕುಮತಿಯ ಬಿಡಿಸಿದರು1 ಶಬ್ದಾದಿ ಮೊದಲಾದ ವಿಷಯಂಗಳಾ ಕರ್ಮ ದಬ್ಧ್ದಿಯೊಳಗೆ ಬಿದ್ದು ಪೊರುಳುತಿದ್ದಾ ಲುಬ್ಧಕನ ಕರೆದು ದೃಢವಾಗಿ ಸುಜ್ಞಾನದ ಅಬ್ಧಿಯೊಳಗಿಟ್ಟು ಕರುಣದಲಿ ನೋಡಿದರು 2 ಹಿಂದೆ ಏಸೇಸು ಜನ್ಮ ಜನಿಸಿ ಅನ್ಯ ಕಾಲ ನೊಂದ ನರನಾ ತಂದು ವೈರಾಗ್ಯದೊಳು ಪೊಗಸಿ ಸೌಖ್ಯವ ಪರಶಿ ತಂದೆ ಮಕ್ಕಳನು ಸಾಕಿದಂತೆ ಸಾಕಿದರು3 ಉಪದೇಶವಿತ್ತರು ಸುಪ್ರೀತಾರ್ಥದಲಿ ಬಂದು ಜಪ ನಿಜಾಸನ ಧ್ಯಾನ ಜ್ಞಾನದಿಂದ ಸಪುತೆರಡು ಲೋಕದ ಒಡೆಯನ್ನ ಪಾದವ ಸಫಲವಾಗುವಂತೆ ಸಾಧನವ ಪೇಳಿದರು 4 ದಾರಿದ್ರ ದೋಷವ ಸೇರಿದ ಮಾನವನಿಗೆ ಆರು ಕೊಡದಲೆ ಧೇನು ದೊರಕಿದಂತೆ ಕಾರುಣ್ಯದಲಿ ಗುರು ಪುರಂದರದಾಸರು ಮೂರುತಿ ವಿಜಯವಿಠ್ಠಲನ್ನ ತೋರಿಸಿದರು 5
--------------
ವಿಜಯದಾಸ
ರಾಮ ರಾಮೆನ್ನಿರೊ ಸೀತಾಪತಿ ರಾಮ ರಾಮೆನ್ನಿರೊಪ. ಗಂಗೆಯೊಳ್ ಮುಳುಗಲ್ಯಾಕೆ ನಡೆದು ಬಲು ಭಂಗವ ಪಡುವುದ್ಯಾಕೆ ಮಂಗಲದಾತ ನರಸಿಂಗನ ನಾಮವ ಹಿಂಗದೆ ನೆನೆದರಿಷ್ಟಂಗಳ ಕೊಡುವ1 ಉಪವಾಸ ಮಾಡಲ್ಯಾಕೆ ಕಪಟದೊಳು ಗುಪಿತದಿ ಕುಳ್ಳಲ್ಯಾಕೆ ಉಪಮೆರಹಿತ ಶ್ರೀಪತಿ ಕೃಷ್ಣರಾಯನ ಜಪಿಸಿ ಬಂದರೆ ಜನ್ಮ ಸಫಲವಾಗುವುದಲ್ಲೋ2 ಧ್ರುವನು ಸದ್ಗತಿ ಪಡೆದ ಕರುಣದಿಂದ ಪವಮಾನಿಗೆ ಒಲಿದ ಭುವನ ಈರಡಿ ಮಾಡಿ ಬಲಿಯನ್ನು ಸಲಹಿದ ಬವರದೊಳಗೆ ದಾನವರನ್ನು ಮಡುಹಿದ3 ಯಾತ್ರೆಗೆ ಪೋಗಲ್ಯಾಕೋ ಕಾವಡಿ ಪೊತ್ತು ತೀರ್ಥಸ್ನಾನಗಳ್ಯಾತಕೋ ಮಾಧವ ಶತಪತ್ರನಾಭನ ಸಂ- ಕೀರ್ತನಾದಿಗಳೆ ಪರತ್ರಸಾಧನವಲ್ಲೊ4 ಭೂರಿಯಾಯಾಸವ್ಯಾಕೋ ಬರಿದೆ ಸಂ- ಸಾರವ ನಂಬಲ್ಯಾಕೋ ಮಾರಾರಿಸಖ ಲಕ್ಷ್ಮೀನಾರಾಯಣನನ್ನು ಸೇರಿ ಭಜಿಪರ ಉದ್ಧಾರಮಾಡುವ ಶ್ರೀ5
--------------
ತುಪಾಕಿ ವೆಂಕಟರಮಣಾಚಾರ್ಯ
ವಸ್ತು ಒಂದೆ ಅದೆ ಅನಾದಿಯಿಂದ ಸ್ವಸ್ತ ಮಾಡಿಕೊಳ್ಳಿ ಗುರುಮುಖದಿಂದ ಧ್ರುವ ಹೂವಿಲ್ಲದೆ ಫಲವಾಗುವ ಕಾಯಿ ಠಾವಿಲ್ಲದೆ ಮ್ಯಾಲೆ ಮುಚ್ಯಾದೆ ಮಾಯಿ ಭಾವಿಕರಿಗಾದೆವು ಪಾಯಿ ಠಾವಿಕಿ ಮಾಡಿಕೊಬೇಕು ತಾಯಿ 1 ಬೀಜಿಲ್ಲದೆ ಫಲ ನಿಜವಾಗ್ಯದೆ ಮೂಜಗದೊಳು ರಾಜಿಸುತ್ತದೆ ಸೂಜಿಮೊನೆಗಿಂತ ಸಣ್ಣವ್ಯಾಗದೆ ವಾಜಿಹೀನರ ವರ್ಜಿಸುತದೆ 2 ನೋಡೇನೆಂದರೆ ನೋಟಕತೀತ ಹಿಡಿದೇನಂದರೆ ಸಿಕ್ಕದು ಸ್ವಸ್ಥ ಪಡೆದುಕೊಂಡವರಿಗೈದೆ ಆಯಿತ ಮೂಢ ಮಹಿಮತಿ ಗುರು ನಿಜಹಿತ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಹಿತ ಸುಪಥ ಸಾಧನ ಪಡೆದು ಸ್ವಸುಖಗೂಡಿರೊ ವಿಹಿತ ಮರೆದು ವಿಭ್ರಮಾಚರಿಸಬ್ಯಾಡಿರೋ ಧ್ರುವ ದಾರು ತಿಳಿದು ನೋಡಿರೊ ಜ್ಞಾನ ಹೀನರಾಗಿ ಗರ್ವ ಹಿಡಿಯಬ್ಯಾಡಿರೊ ಸ್ವಾನುಭವಾಮೃತವನ್ನುಂಡು ಸವಿ ಸೂರ್ಯಾಡಿರೊ ನಾನು ನೀನು ಎಂಬ ಬಿನಗುಭ್ರಮ ಈಡ್ಯಾಡಿರೊ 1 ಮನದ ಕೊನಿಯಲಿದ್ದ ಘನದಾಶ್ರಯವು ಮಾಡಿರೊ ತನುವು ಲಂಪಟ್ಹಿಡಿದು ತನ್ನ ಮರಿಯಬ್ಯಾಡಿರೊ ಜನುಮ ಸಫಲವಾಗುವ ಸುಜಾಗ್ರತಿಯ ಪಡೆಯಿರೊ ನೆನವು ನೆಲೆಯಗೊಂಡು ನಿಜದಾಶ್ರಯದಲಿ ನಡೆಯಿರೊ2 ಮರ್ತು ಮೈಯ ವ್ಯರ್ಥ ದಿನವಗಳಿಯಬ್ಯಾಡಿರೊ ನಿರ್ತದಿಂದ ಅರ್ತ ಭಾವದರ್ಥಿ ನೋಡಿರೊ ಕರ್ತು ಭಾನುಕೋಟಿತೇಜನ ಗುರ್ತು ಮಾಡಿರೊ ಅರ್ತು ಮಹಿಪತಿ ಸ್ವಾಮಿಪಾದ ಬೆರ್ತುಕೂಡಿರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅಪಮಾನವಾದರೆ ಒಳಿತು |ಅಪರೂಪ ಹರಿನಾಮ ಜಪಿಸುವ ಮನುಜಗೆ ಪಮಾನದಿಂದಲಿ ಅಭಿಮಾನ ಪುಟ್ಟವುದು |ಮಾನದಿಂದಲಿ ತಪ ಹಾನಿಯಾಯಿತು ಹಾನಿಯಾಗುವುದು ||ಮಾನಿ ಕೌರವನಿಗೆ ಹಾನಿಯಾಯಿತು-ಅನು-|ಮಾನವಿಲ್ಲವು ಮಾನ-ಅಪಮಾನ ಸಮರಿಗೆ 1ಅಪಮಾನದಿಂದಲಿ ತಪವೃದ್ಧಿಯಾಹುದು |ಅಪಮಾನದಿಂ ಪುಣ್ಯ ಸಫಲವಾಗುವುದು ||ಅಪಮಾನದಿಂದಲಿನೃಪಧ್ರುವರಾಯಗೆ |ಕಪಟನಾಟಕ ಕೃಷ್ಣ ಅಪರೋಕ್ಷನಾದನು2ನಾನೇನ ಮಾಡಲಿ ಆರಲ್ಲಿ ಪೋಗಲಿ |ಕಾನನಚರರಾರಾಧ್ಯ ನೀನಿರಲು ||ದೀನರಕ್ಷಕ ನಮ್ಮ ಪುರಂದರವಿಠಲನೆ |ಏನು ಬೇಡೆನಗಪಮಾನವೆ ಇರಲಿ 3
--------------
ಪುರಂದರದಾಸರು
ರಾಮ ರಾಮೆನ್ನಿರೊ ಸೀತಾಪತಿ ರಾಮ ರಾಮೆನ್ನಿರೊ ಪ.ಗಂಗೆಯೊಳ್ ಮುಳುಗಲ್ಯಾಕೆ ನಡೆದು ಬಲುಭಂಗವ ಪಡುವುದ್ಯಾಕೆಮಂಗಲದಾತ ನರಸಿಂಗನ ನಾಮವಹಿಂಗದೆ ನೆನೆದರಿಷ್ಟಂಗಳ ಕೊಡುವ 1ಉಪವಾಸ ಮಾಡಲ್ಯಾಕೆ ಕಪಟದೊಳುಗುಪಿತದಿ ಕುಳ್ಳಲ್ಯಾಕೆಉಪಮೆರಹಿತ ಶ್ರೀಪತಿ ಕೃಷ್ಣರಾಯನಜಪಿಸಿ ಬಂದರೆ ಜನ್ಮ ಸಫಲವಾಗುವುದಲ್ಲೋ 2ಧ್ರುವನು ಸದ್ಗತಿ ಪಡೆದ ಕರುಣದಿಂದಪವಮಾನಿಗೆ ಒಲಿದಭುವನಈರಡಿಮಾಡಿ ಬಲಿಯನ್ನು ಸಲಹಿದಬವರದೊಳಗೆ ದಾನವರನ್ನು ಮಡುಹಿದ 3ಯಾತ್ರೆಗೆ ಪೋಗಲ್ಯಾಕೋ ಕಾವಡಿ ಪೊತ್ತುತೀರ್ಥಸ್ನಾನಗಳ್ಯಾತಕೋಕರ್ತುಮಾಧವಶತಪತ್ರನಾಭನ ಸಂ-ಕೀರ್ತನಾದಿಗಳೆ ಪರತ್ರಸಾಧನವಲ್ಲೊ 4ಭೂರಿಯಾಯಾಸವ್ಯಾಕೋ ಬರಿದೆ ಸಂ-ಸಾರವ ನಂಬಲ್ಯಾಕೋಮಾರಾರಿಸಖ ಲಕ್ಷ್ಮೀನಾರಾಯಣನನ್ನುಸೇರಿ ಭಜಿಪರ ಉದ್ಧಾರಮಾಡುವ ಶ್ರೀ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ