ಪರಸಿರಿಗೆ ಕರಗುತಿಹುದು ಸರಿಯೇ ಯೋಚಿಸು ಪ
ಹರಿಯು ಕರುಣದಿಂದ ಕೊಟ್ಟ ಸಿರಿಗೆ ತೃಪ್ತನಾಗದÀಂತೆ ಅ.ಪ
ಉರಗನ ನೆರಳಲ್ಲಿ ಕಪ್ಪೆಯು ಚಿರಕಾಲ ಜೀವಿಸುವುದೇ
ಧರೆತಲದಲಿ ನರರ ಸಿರಿಯು ಸ್ಥಿರವಲ್ಲವೆಂದರಿಯದಂತೆ 1
ಹಲವು ಜನುಮಗಳ ಕರ್ಮದ ಫಲವನರಿತು ಮೋಸವಿಲ್ಲದೆ
ನಳಿನನಾಭ ನಾರಾಯಣನೊಲಿದು ಕೊಡುವನೆಂದರಿಯದೆ 2
ಎನ್ನದೆಂದು ನಿನ್ನದೆಂದು ಖಿನ್ನನಾಗುವುದು ಸರಿಯೆ
ಸನ್ನುತ ಪ್ರಸನ್ನ ಹರಿಯು ತನ್ನ ಭಾಗ್ಯವನರಿತು ನೀಡಲು 3