ಎಂಥಾ ಜಾಣೆಯೋ ಸುಪ್ರವೀಣೆಯೋ ಮುನ್ನಾಕೆಎಂಥಾ ನೋಂಪಿಯನೋಂತ ಫಲವೋಕಾಂತನ ಪರಕೀಯ ಕಾಂತೆಯೆಡೆಗ ಬಿಡ-ದಂತೆ ಸಂತಸದೊಳೇಕಾಂತ ಸುಖದೊಳಿರ್ಪ ಪ
ನುತ ಹಂಸತೂಲತಲ್ಪದೊಳು ನಾನಾ ಬಂಧಗತಿಯಲಿ ಕಾಮಕೇಳಿಯನೆಸಗಿರತಿಸುಖಪಾರವಶ್ಯದೊಳೊಂದು ವರುಷದಮಿತಿಯನು ತೃಟಿಕಾಲವೆಂದುಸುರುವಳು ತಾ 1
ಹೆಣ್ಣು ಜನ್ಮದಿ ಹುಟ್ಟಿದುದಕೆ ಫಲವದುಕನ್ನೆಯರೊಳಗೆ ಕಟ್ಟಾಣಿಯಾಕೆಮುನ್ನೆಷ್ಟುಗಾಲ ತಪವ ಮಾಡಿ ತಾನಿಂಥಾಪುಣ್ಯವ ಪಡೆದಳಾಕೆಯ ಜನ್ಮ ಸಫಲವೋ2
ವರುಷವಾಗಲಿ ಒಂದು ದಿನವಾದರಾಗಲಾತರುಣಿಯ ಭೋಗದಂತಿರಬೇಡವೆಇರುಳು ಹಗಲು ಕಾಣದಂತೆ ಶ್ರೀ ಕೆಳದಿಯಪುರದ ರಾಮೇಶನೊಳ್ಪರಸದೊಳಿರುವಳಿಂ 3