ಮರುಳುತನವಿದ್ಯಾಕೆ ಮನವೆ ಮಂದಭಾವದಿ ಶ್ರೀ-
ಧರೆಯರಸ ಸ್ವೇಚ್ಛೆಯಿಂದ ಪೊರೆವ ತಾನೆ ಕರುಣದಿ ಪ.
ಕಾಲ ನಾನಾ
ಫಲಗಳನ್ನು ತೋರ್ಪುದು ಶ್ರೀ ಲಲನೆಯರ ಸನಿಚ್ಛೆಯಿಂದ 1
ಛಳಿಯು ಬಿಸಿಲು ಮಳೆಯು ಗಾಳಿ ಸುಳಿವದ್ಯಾರ ಕೃತ್ಯವೆಂದು
ತಿಳಿದು ನೋಡಲಿನ್ನು ವ್ಯರ್ಥ ಫಲವಗೊಳ್ಳುತಳಲದಿರು 2
ಸತ್ಯ ಸಂಕಲ್ಪಾನುಸಾರ ಭೃತ್ಯವರದ ಕರುಣದಿಂದ-
ಲಿತ್ತುದೆ ಸಾಕೆಂದು ತಿಳಿವದುತ್ತಮ ಸಾಂಗತ್ಯ ಬಯಸು 3
ಹಸಿದ ವೇಳೆಯಲ್ಲಿ ತಾಯಿ ಬಿಸಿಯ ಹಾಲ ತಣಿಸಿ ತನ್ನ
ಶಿಶುವಿಗೀವ ತೆರದಿ ಭಕ್ತವಶನ ಮೇಲೆ ಭಾರವಿರಿಸು 4
ನೆನೆವ ಜನರ ಮನದೊಳಿರುವ ವನಜನಾಭ ವೆಂಕಟೇಶ
ವಿನಯದಿಂದ ಕಾವನೆಂಬ ಘನವ ತಿಳಿದು ಪಾಡಿ ಪೊಗಳು 5