[ದಿತಿಜರಿಗೆದುರಾಂತ] ಕೃತಾಂತಗತಿ ನೀ ನಮಗೆ ಗುಣವಂತ ಹನುಮಂತಪ.
ಕೇಸರಿತನಯ ದಕ್ಷಿಣಗಾಗಿ ಬಂದೆ ವ-ರುಷಗಳಿಂದಲಿ ಬಲುಗಿರಿಯನು ತಂದೆಈಶ ರಘುಪತಿ ಸೇವೆ ಘನವಾಗಿ ನಿಂದೆಅಸುರ ರಾವಣನ ಸರ್ವ ಸೈನ್ಯವ ಕೊಂದೆ 1
ಅಂಬುಧಿಯ ದಾಂಟಿ ಸೀತೆಯ ರೂಪ ಕಂಡೆಕುಬುದ್ಧಿಯ ರಾವಣನ ಪುರವ ಸೂರೆಗೊಂಡೆವಿಬುಧರ ಸ್ನೇಹವ ಮಾಡಿದೆ ಬಲುಗಂಡೆಪ್ರಬುದ್ಧರಂದದಿ ಪುಣ್ಯಫಲರಸ ಉಂಡೆ 2
ಹಯವದನನ ಕೃಪೆ ಪ್ರಿಯ ಹೂಡಿ ಪೊತ್ತೆ ಪ್ರಿಯವಾದ ಭವತರುವಿನ ಬೇರ ಕಿತ್ತೆಭಯವ ಖಂಡಿಸಿ ನಮಗಭಯವನಿತ್ತೆಜಯಜಯ ಪ್ರಾಣನಾಥ ನಮೋ ನಮಸ್ತೆ 3