(ಭೀಮನಕಟ್ಟೆ ಶ್ರೀರಾಮ)
ಅಚ್ಯುತಪ್ರೇಕ್ಷ ಕರಾರ್ಚಿತ ರಾಮ
ರಕ್ಷಿಸು ಚಂದನಚಾರ್ಚಿತ ರಾಮ ಪ.
ದಾಸಾಗ್ರಣಿ ಭೀಮಸೇನನ ಮನ
ದಾಸೆ ಪೂರಿಪೆನೆಂದು ಬಂದಿಲ್ಲಿ
ವಾಸವಾಗಿಹೆ ತುಂಗಾ ತೀರದಿ ಜಾನ
ಕೀಶ ನಿನ್ನನು ಕಂಡೆ ಮೋದದಿ 1
ಶ್ರೀ ರಾಮದುರಿತಾಬ್ಧಿವಾರಣ ಹಾದಿ
ದೋರೊ ಮುಂದಕೆ ಫಲಪೂರಣ 2
ಕೀಶಗೆ ಕಪಿರಾಜ್ಯ ಕೊಡಿಸಿದಿ ವಿ-
ಭೀಷಣನನು ತೋಷಗೊಳಿಸಿದಿ
ಶೇಷಾದ್ರಿ ಶಿಖರದಿ ನಿಲಿಸಿದಿ ನೀನೆ
ಪೋಷಿಪನೆಂದಿಗು ನಿರುತದಿ 3