ಉದ್ಧರಿಸಿ ಸಲಹಿವನ ಮಧ್ವಪತಿ ವಿಠಲಾ
ಶುದ್ಧ ಬುದ್ಧಿಯನಿತ್ತು ಬಿಡಿಸುಮನ ಚಂಚಲಾ ಪ
ಪದಿನಾರ ಶತಕದೊಳು ಮೊದಲು ಜನ್ಮವ ತಾಳಿ
ಸದಮಲ ದಾಸರಾಯರ ಪುತ್ರನೆನಿಸಿ
ಪದುಮನಾಭನ ಪಾಡಿ ಮುದದಿ ಭವನುತ್ತರಿಸಿ
ಯದುಪತಿಯ ಪಾದಾರವಿಂದವ ಪಡೆದನು 1
ಕರ್ದಮ ಬಲದಿ ಉತ್ತುಮರ ಕುಲವಲ್ಲಿ
ಸ್ತುತ್ಯಗುರು ಪೂರ್ಣಪ್ರಜ್ಞರ ಮತದಿ ಜನಿಸಿ
ವತ್ತರದಿ ದಾಸರಾಯರು ಮಾರ್ಗ ಪೇಳಲು
ಮತ್ತೆ ಹರಿಭಕ್ತಿಯಿಂದಲಿ ಜನ್ಮ ತಳೆದಾ2
ನಲನಾಮ ವತ್ಸರದ ಫಲಪುಷ್ಪದಮಾವಾಶ್ಯಾ
ಜಲಧಿ ಶಯನನ ದಾಸರಾಯರ ದಿನದಿ
ಸುಲಭ ನರಸಿಂಹ ವಿಠ್ಠಲ ಕರುಣಿ ಸಂತತವ
ಕಲುಷರಹಿತೇನರಗೆ ಬಲದಿ ಒಲಿದಿತ್ತನು 3