ಹರಿಪಾದ ತೀರ್ಥವನು ಕರದಿ ಪಿಡಿದವರೆಲ್ಲ
ತಿರುನಾಮದವರೆನಲು ನಂಬಬಹುದೇ ಪ
ಪರವಾಸುದೇವನನು ಮರೆತು ಸತಿಸುತರ
ವರಾಭರಣವೇ ಹಿರಿದೆಂಬ ನರರಿಲ್ಲವೇ ಅ.ಪ
ಹರಿನಿವೇದನಕಾಗಿ ಕರದಿ ಫಲಪುಷ್ಪಗಳ
ತರುವವರು ದಕ್ಷಿಣೆಯ ಇರಿಸಿಹರೋ ಎಂದು
ಪರಿಪರಿಯ ದೃಷ್ಟಿಯಲಿ ಪರಿಕಿಸುತ ಅಲ್ಲವೆಂ
ದರಿತಾಗ ಕೋಪ ನಿಷ್ಠುರ ಗೈಯುವರು 1
ಈಶಾಯನಮಃ ಓಂ ಶ್ರೀಶಾಯ ನಮಃ ಪ
ರೇಶಾಯ ನಮಃ ಎಂಬುದಕೆ ಬದಲು
ಆಶೋತ್ತರವನಾಂತು ಕ್ಲೇಶಪೂರಿತರಾಗಿ
ನಾಶವಾಗಲಿ ಕುಡದಜನರೆಂಬರಕಟಾ 2
ಮಾನವೋತ್ತಮ ಮಾತ್ರ ತಿರುನಾಮಧಾರಿ
ಜ್ಞಾನಿ ಇಂಥವನಿಂದ ತೀರ್ಥವನು ಪಡೆದವರು
ಶ್ರೀನಾಥ ಮಾಂಗಿರಿಯ ಭಕ್ತರೆನಿಸುವರು3