ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಮಹಾಲಕ್ಷಮಿತಾಯೇ | ಶ್ರೀ ಮಹಾಮಾಯೆ | ಹೇಮಾಯಾ ಕರುಣಾಬ್ದಿಯೇ | ಕಾಮಿತ ಫಲನೀಯೇ | ಸಾಮಜಗಮನಿಯೇ | ಹೇಮಾಯಾ ಕೋಟಿ ಸಮಕಾಯೇ | ಶುಭಚರಿಯ | ಬಹುಪರಿಯೇ | ಹರಿಪ್ರೀಯೇ | ಅರಿಯೇ ಪ ಶರಧಿಸುತವನೇ | ಸರಸಿಜಸದನೆ | ಸುರಚಿರದವರಾನೆ | ಕರಿಸರ್ಪವೇಣೆ | ದುರಿತಾದೌಘಪಹರಣೆ | ಕರುಣದಾಗಾರೆ ಶರಣೆ | ನೆರೆನಿನ್ನನಂಬಿದೆನೆ ಮಾತೆ | ಅದ್ಭುತೆ | ರವಿನಮಿತೆ | ಪ್ರಖ್ಯಾತೆ | ದಾತೆ 1 ಹೊಳೆವ ಸೌಂದರ್ಯ ಸಲಹೆ | ಸಲೆಕುಲದೈವೆ | ಸುಜನ ಸೇವೆ | ಮಲಿನರ ಭಾವೆ | ಹಲವು ಮಾತೇನು ಫಲವೇ | ಬಲುನಾಹಂಬಲಿಸುವೆ | ಒಲಿದು ಕರುಣಿಸು ಭಾಗ್ಯವಂತೆ | ಗುಣವಂತೆ | ಬಹುಶಾಂತೆ | ದಯವಂತೆ ಕಾಂತೆ 2 ಕರವೀರ ಪುರಧೀಶೆ | ಶರಣರುಲ್ಹಾಸೆ | ಸುರಮುನಿಜನತೋಷೆ | ಶಿರಸ್ವಪ್ರಕಾಶೆ | ಪರತರ ಸುವಿಲಾಸೆ | ಗುರುಕೃಷ್ಣಸುತನೀಶೆ | ವರಕೊಲ್ಹಾಸುರನ ವಿನಾಸ | ಜಗದೀಶೆ | ಮೃದುಭಾಷೆ | ಅವಿನಾಶೆ | ಈಶೆ 3 ಅಂಕಿತ-ಗುರುಕೃಷ್ಣಸುತ
--------------
ಕಾಖಂಡಕಿ ಶ್ರೀ ಕೃಷ್ಣದಾಸರು