ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮಜನಕ ಭೃಗು ರಾಮ ದಯಾಂಬುಧಿ ಕಾಮಿತ ಫಲದಾಯಿ ಪ. ಮಂಗಳಾಯನ ಮಾತರಿಶ್ವನುತಾ ದಯವಾಗು ದ್ವಿಯುಗ ಶೃಂಗ ಹವ್ಯವಹಾಂತರಂಗಗತ ದು:ಕ್ಷತ್ರಹಂತಾ ತುಂಗ ಪರಶುಧರಾಂಸಬಾಹು ನಿಭಾಂಗ ಶಾರ್ಙಶರಾಸನಾರ್ಜುನ ದುರಿತ ತರಂಗ ಸಂಗರಮಾಂಗಸಂಗತ 1 ನೀನೆ ಗ್ರಹಪತಿಯೆಂಬುದನು ತಿಳಿದು ದುರ್ಮೋಹವಳಿದು ತಾನು ಯನ್ನುವಹಂಕೃತಿಯು ಕಳಿದು ನಿನ್ನಲ್ಲಿ ನಲಿದು ಸ್ನಾನ ಹೋಮ ಸುರಾರ್ಚನಾದಿಗ ಳೇನು ಮಾಡಿದರೆಲ್ಲ ನಿನ್ನ ಸಮಾನಕರಿಪ ಮಹಾನುಭಾವನೆ 2 ಒಪ್ಪಿಸಿದೆ ಸರ್ವಸ್ವವನು ನಿನಗೆ ಗತಿ ನೀನೆ ಎನಗೆ ಕಪ್ಪಕಾಣಿಕೆ ಎಲ್ಲವೂ ನಿನಗೆ ಇದು ಸತ್ಯ ಕೊನೆಗೆ ಅಪ್ಪಳಿಸು ರಿಪುಪುಂಜವನು ಬರುತಿಪ್ಪದುರಿತವ ಭಂಗಿಸುತ ನ- ಕಂದರ್ಪಭಂಜನ ಸರ್ಪಗಿರಿವರ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಾಣೀ ಪರಮ ಕಲ್ಯಾಣಿ - ವಾರಿಜೋದ್ಭವನ ರಾಣೀ ನಾರೀ ಶಿರೋಮಣಿ ಪ ಕ್ಷೋಣಿಯೊಳಗೆ ಸರಿಗಾಣೆನೆ ನಿನಗೆ ಸು- ಪ್ರಾಣಿಯೆ ಹರಿಪದರೇಣು ಧರಿಪೆ ಸದಾ ಅ. ಪ. ಸರಸ್ವತಿ ನಿತ್ಯಾಸಾವಿತ್ರಿ ದೇವಿ ಗಾಯತ್ರಿ ಸರಸಿಜದಳ ಸುನೇತ್ರಿ ನಿಕರ ಸ್ತೋತ್ರಿ - ಶೋಭನಗಾತ್ರಿ ಕರುಣಾಸಾಗರೆ ಪವಿತ್ರಿ ಚರಣದಂದಿಗೆ ಪಂಚ ಬೆರಳು ಭೂಷಣ ಧ್ವನಿ ಸರವು ಕನಕ ಗೆಜ್ಜೆ ಸರಪಳಿ ಪೊಳೆವಾಂ- ಬರಧರೆ ಸುಂದರಿ ಎರಗುವೆ ಎನ್ನನು ಎರವು ಮಾಡದೆ ತ್ರಿಕರಣ ಶುಧ್ಧನೆ ಮಾಡೆ 1 ಸರ್ವರಾತ್ಮಕೆ ಪ್ರಖ್ಯಾತೆ-ಧವಳಗೀತೆ ಸರ್ವರಿಗೆ ಮಹಾ ಪ್ರೀತೆ ನಿರ್ವಾಹವಂತೆ ಪತಿವ್ರತೆ ನಿರ್ಮಲ ಚರಿತೆ ಪೂರ್ವದೇವತೆ ಹರಿಜಾತೆ ಉರ್ವಿಯೊಳಗೆ ಮದಗರ್ವದ ಮತಿನಾ- ನೋರ್ವನಲ್ಲದೆ ಮತ್ತೋರ್ವನ ಕಾಣೆನು ಪೂರ್ವಜನ್ಮದ ಪಾಪ ಪರ್ವತದಂತಿದೆ ನಿರ್ವಾಹವನುಮಾಡೆ ದೂರ್ವಾಂಕುರದಿ 2 ನಿಗಮಾಭಿಮಾನಿ ಸುಜ್ಞಾನಿ ಅಗಣಿತ ಫಲದಾಯಿನಿ ಝಗಝಗಿಸುವ ಕರಯುಗಳ ಭೂಷಣ ಪ - ನ್ನಗವೇಣಿ ಕುಂಕುಮ ಮೃಗಮದ ವೊಪ್ಪಲು ಜಗತ್ಪತಿ ಪ್ರದ್ಯುಮ್ನ ವಿಜಯವಿಠ್ಠಲನಮಗಳೆ ಸುಖಾತ್ಮಕೆ ಜಗದಿ ಶುಶ್ರೋಣೆ 3
--------------
ವಿಜಯದಾಸ
ವಾರಿಧಿ ಸುತಿಗೆ ಸಾರ ಸಂಗೀತದಿಂದಲಿ ಪ ಸಕಲ ವಸ್ತುವೆನಿಸಿ ಮುಕುತಿದಾಯಕ ಹರಿಗೆ ಭಕುತಿಯಿಂದಲಿ ಬಿಡದೆ | ಸದಾಪೂಜಿಪ ಸಿರಿಗೆ ವಿಖನ ಸಾದ್ಯಮರ ಗಣಕೆ | ಸುಖ ಕೊಡುವಳಿಗೆ ಮಕರಧ್ವಜನ ಮಾಲೆಯಾದ ರುಕುಮನನುಜಗೆ 1 ಚಾರುಶ್ರಾವಣ ಭಾರ್ಗವ ಶುಭವಾರದ ದಿನದಿ ಭೂರಿ ಭಕ್ತಿ ಭರಿತಳಾಗಿ ನಮಿಸುತ ಮನದಿ ನೀ ಆರಾಧಿಸೆ ಘೋಡಶ ಉಪಚಾರದಿ ಮುದದಿ ಕೋರಿಕೆಯನು ಗರೆಯುವ ವರಲಕ್ಷ್ಮಿಗೆ ಜಯದಿ2 ತಾಮರಸ ಸುಧಾಮಳಾದ ಸೋಮವದನಿಗೆ ಗೋಮಿನಿ ಸೌದಾಮಿನಿ ಸಮ ಕೋಮಲಾಂಗಿಗೆ ಶಾಮಸುಂದರ ಸ್ವಾಮಿಯ ಸುಪ್ರೇಮದ ಸತಿಗೆ ಕಾಮಿತ ಫಲದಾಯಿನಿ ಶ್ರೀ ಭೂಮಿಜೆ ರಮಗೆ3
--------------
ಶಾಮಸುಂದರ ವಿಠಲ
ಶ್ರೀಪತಿ ಭಯಹಾರಿ ರಕ್ಷಿಸು ತಾಪತ್ರಯವಾರಿ ಕೋಪಲೇಶನ ಮನೋನುಪಹಾರಿ ಭೂಪತಿರೂಪವಿಹಾರಿ ಪ. ಅಖಿಳ ಜನನಿ ಭರ್ತಾ ಪಾಲನ ಮಹಾಧುರಧರ್ತಾ ಭಕುತಿಯ ಪಾಲಿಸು ಭಯ ಪರಿಹರ್ತಾ 1 ಕಾಮಿತ ಫಲದಾಯಿ ತುಲಸೀಧಾಮ ಶೇಷಶಾಯಿ ತಾಮರಸಾಸನ ದೇವನ ತಾಯಿ ಶ್ರೀ ಮಹೇಶನೀ ತ್ವರಿತದಿ ಕಾಯಿ2 ನಾಗಭೂಧರೇಶ ಕರುಣಿಸು ಬೇಗದಿ ಸರ್ವೇಶ ರಾಗ ರೋಗ ಗಣ ನೀಗು ನಿನ್ನಡಿಗೆ ಬಾಗುವೆ ಲಕ್ಷ್ಮೀಶ 3
--------------
ತುಪಾಕಿ ವೆಂಕಟರಮಣಾಚಾರ್ಯ