ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯತೀರ್ಥ ಗುರುರಾಯ ಕವಿಗೇಯಾ ಪಾದ ದ್ವಯಕಭಿನಮಿಸುವೆ ಶುಭಕಾಯ ಪ ಪಾದ ಪಾದ ದ್ವಂದ್ವಾರಾಧಕರ ಸಂಬಂಧಿಗ ನರ ನೆಂದು ಪಾಲಿಪುದು ಕಾರುಣ್ಯ ಸಾಗರ ಮಂದ ನಾನು ಕರ್ಮಂದಿಗಳರಸ ಮು ಕುಂದನ ತೋರೋ ಮನಮಂದಿರದಲ್ಲಿ 1 ಹರಿಪಾದಾಂಬುಜಾಸಕ್ತ ನಿಜ ಭಕ್ತ ಜನರಾ ಪರಿಪಾಲಿಪ ಸಮರ್ಥ ಅಕ್ಷೋಭ್ಯ ತೀರ್ಥ ಕರಕಮಲ ಸಂಜಾತಾನಂದ ದಾತಾ ಪರÀಮಹಂಸ ಕುಲವರನೆ ವಂದಿಸುವೆ ಕರುಣದಿಂದಲೆನಗರುಪು ಸುತತ್ವವ 2 ಕಾಮಿತ ಫಲದಾತಾ ಜಗನ್ನಾಥ ವಿಠ್ಠಲ ಸ್ವಾಮಿ ಪರಮ ದೂತಾ ಸುವಿಖ್ಯಾತಾ ಶ್ರೀ ಮಧ್ವ ಮತಾಂಬರುಹ ಪ್ರದ್ಯೋತಾ ತಾಮಸಗಳೆದೀ ಮಹೀಸುರರ ಮ ಹಾಮಹಿತರ ಮಾಡ್ದೆ ಮುನಿವರ್ಯಾ 3
--------------
ಜಗನ್ನಾಥದಾಸರು
ಶ್ರೀಮುರಳೀಧರ ಕೃಪಾಕರ ಜೀಮೂತನೀಲಾಂಗ ಶೃಂಗಾರ ಪ ಸಾಮಜಭಯಪರಿಹಾರ ಕಾಮಿತ ಫಲದಾತಾರ ಸಾಮದಾನಾದಿ ಚತುರ ಪರಾತ್ಪರಾ ಶುಭಂಕರಾ ಅ.ಪ ಶಾಂತಿ ಸುಗುಣ ಪೂರಣ ಭವತರಣ ಆಂತರ್ಯ ಸಂಚಾರಣ ಭಯಹರಣ ಪೂತನೀ ಪ್ರಾಣಹರಣ ಪಾಂಡುಪುತ್ರಸಮೀಕ್ಷಣ ನೀತಿ ನಿಯಮ ಸಂತ್ರಾಣ ಮಾಂಗಿರೀಶ ಚರಣ ವಿಹರಣ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್