ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ವೀಕರಿಸೈ ಕರುಣಾಕರ ಶ್ರೀವರ ಲೋಕವಂದಿತ ಪ್ರಭುವೆ ಪ ಮಾಕಮಲಾಸನ ನಾಕಪಾಲವಂದ್ಯ ಮಾತುಳಾಂತಕ ಮಧುಸೂದನ ಶ್ರೀಹರಿ ಅ.ಪ ಮಾವು ಮಾದಳ ದ್ರಾಕ್ಷ ಬಾಳೆ ಕಿತ್ತಳೆ ಮೊದಲಾದ ಫಲಗಳೆಲ್ಲ ಮಾಧವ ನೀನಿದನಾರೋಗಣೆ ಮಾಡು ಶ್ರೀ ರಮಣಿಯ ಪ್ರಿಯ ಶ್ರೀನಿವಾಸನೆ ಬೇಗ 1 ನಾನಾ ವಿಧದ ಫಲ ಹಾಲು ಸಕ್ಕರೆ ಬೆಣ್ಣೆ ನಾರಾಯಣ ನಿನಗೆ ಬಾಲೆ ಲಕುಮಿ ಪರಮಾದರದಿಂದಲಿ ಸೇವೆಗೆ ಪರಮಾನ್ನವನರ್ಪಿಸುವಳು2 ತನುವೆಂಬೊ ತಟ್ಟೆಯೊಳಿರಿಸಿ ಫಲವ ನಿ- ರ್ಮಲಮನವೆಂಬ ವಸ್ತ್ರವನ್ಹೊದಿಸಿ ಸನ್ಮತವೆಂಬ ಸಾರಣೆಮಾಡಿ ನಮ್ಮ ಗುರುಕರುಣದ ರಂಗವಲಿಯನ್ಹಾಕುವೆ 3 ನವವಿಧ ಭಕುತಿಯ ನಳನಳಿಸುವ ವೀಳ್ಯ ಚಲುವ ಶ್ರೀ ಹರಿ ನಿನಗೆ ಸವಿನಯ ನುಡಿಗಳ ಮಂತ್ರ ಪುಷ್ಪಗಳು ಸನಕಾದಿವಂದ್ಯ ಸರ್ವೇಶ ಶ್ರೀ ಕೃಷ್ಣ 4 ಕ್ಷೀರ ಸಾಗರವಾಸಿ ಶ್ರೀ ಭೂರಮಣನೆ ಮಾರಜನಕ ಹರಿಯೆ ಕಾರುಣ್ಯಸಾಗರ ಕಮಲನಾಭ ವಿಠ್ಠಲ ಪಾರುಗಾಣಿಸೊ ಭವಸಾಗರದಿಂದಲಿ5
--------------
ನಿಡಗುರುಕಿ ಜೀವೂಬಾಯಿ
ಹ್ಯಾಗೆ ಕಾಂಬೆ ನಿನ್ನ ಪಾದವ ಶ್ರೀನಿವಾಸ ಯೋಗಿ ಗಮ್ಯ ರೂಪ ಮಾಧವಾ ರಾಗ ರೋಗ ಸಾಗರಸ್ತನಾಗಿ ಮುಳುಗಿ ಬಾಯ ಬಿಡುವೆ ನಾಗರಾಜಗೊಲಿದ ತೆರದಿ ಬೇಗಲೊದಗಿ ಬಂದು ಕಾಯೊ ಪ. ಮನಸು ಎನ್ನ ವಶಕೆ ಬಾರದೆ ಭಕ್ತಿ ಸಾ- ಧನಗಳೆನಗೆ ಸೇರಿ ಬಾಹದೆ ನೆನಸಿಕೊಳುವ ಕಾರ್ಯ ದೊರೆಯದೆ ಸರ್ವಕಾಲ ತನುವ ಕೆಡಿಸಿ ವ್ಯರ್ಥಮಾಡಿದೆ ಕನಲಿ ಕೂಗುತಿರುವ ಶಿಶುವ ಜನನಿ ಕರದೊಳೆತ್ತುವಂತೆ ಮೂರ್ತಿ ದೋರೊ 1 ಕಲಿಯ ಬಾಧೆಯಿಂದ ನೊಂದೆನು ಮಲಿನ ಮೋಹದೊಳಗೆ ನಿಂದೆನು ತ್ಯಾಜ್ಯವಾದ ಫಲಗಳೆಲ್ಲ ತಂದು ತಿಂದೆನು ಗಾಳಿಗೆ ಸಿಲುಕಿದೆಲೆಯ ತೆರದಿ ಹೊರಲುಗಾಣೆನೀ ದೇಹ ಪಾದ ನೆಳಲ ಬಯಸಿ ಬೇಡಿಕೊಳುವೆ 2 ಗಣನೆಯಿಲ್ಲವಾದ ಮರಗಳು ಇರಲು ಪುರು ತನುವಿನಂತೆ ಮುಖ್ಯವಾವದು ಅನುಭವಾತ್ಮ ಸುಖವನೀವದು ಆದರೇನು ಕನಸಿನಂತೆ ಕಾತಿರುವುದು ಪಾದ ವನಜಯುಗವನಿತ್ತು ಎನ್ನ ಮನದೊಳದಯವಾಗು ಮಾರಜನಕ ಮೂಡಲದ್ರಿವಾಸ3
--------------
ತುಪಾಕಿ ವೆಂಕಟರಮಣಾಚಾರ್ಯ