ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ
ಉಡಿಯ ತುಂಬಿರೆ ನಮ್ಮ
ಕಡಲೆ ಕೊಬ್ಬರಿ ಬಟ್ಟಲೊಳು ಬಾಳೆಫಲಗ-
ಳ್ವುಡಿಯ ತುಂಬಿರೆ ನಮ್ಮ ಪ
ಜಂಬುನೇರಲ ಗೊನೆ ಜಾಂಬೂಫಲಗಳು
ನಿಂಬೆ ದಾಳಿಂಬ್ರ ಔದುಂಬ್ರ ಫಲಗಳು 1
ಉತ್ತತ್ತಿ ದ್ರಾಕ್ಷಿ ಕಿತ್ತಳೆ ಸೀತಾಫಲವು
ಅಕ್ಕಿ ಅಂಜೂರ ಉತ್ತತ್ತಿ ಫಲಗಳು2
ಶ್ರೇಷ್ಠ ಭೀಮೇಶ ಕೃಷ್ಣನ ಪಟ್ಟದರಸಿ
ಗ್ಹಚ್ಚಿ ಕುಂಕುಮ ವೀಳ್ಯ ಕೊಟ್ಟು ರುಕ್ಮಿಣಿಗೆ 3