ಕಥಾಶ್ರವಣ ಮಾಡದೆ ನರದೇಹವ ವೃಥಾ ಕಳೆವದೆಂದಿಗು ಸಲ್ಲ
ಪೃಥಾಸುತನ ಮಹರಥಾವನು ಸರ್ವಥಾ ಪೊರೆವ ಸಂಶಯವಿಲ್ಲ ಪ.
ವಿಕಲಿ ಪ್ರವರ್ತನ ಲೋಲಿಕಾಗಮ ಕಲಾನುಕೃತ ದುಷ್ಕಾಲದಲಿ
ಒಲಿವನು ನಿರ್ಮಲಗೊಳಿಸುತಲಿ
ಸಲೀಲವೆ ಲಘುಕರ್ಮದಲಿ
ಸುನೀಲವಕ್ಷ ಸ್ಥಳಾಂತರ ಶ್ರೀಲಲಾಮನನು ಕೊಂಡಾಡುತಲಿ 1
ಅಲ್ಪ ಸುಖವ ಸಂಕಲ್ಪಿಸುವರಿಗಹಿತಲ್ಪನೊಲಿಯ ತಾನೆಂದೆಂದು
ನಾಲ್ವರಿ ಫಲಗಳನಿಪ್ಪನೆ ಸಂಸ್ಕøತಿಯಿಪ್ಪಂದದಿ ದಯದೋರೆಂದು
ಒಪ್ಪಿಸಿ ಮತ್ತವನಿಪ್ಪುದನುಂಡು ನೀರಪ್ಪಣೆಯಲಿ ಸನ್ಮತಗೊಂಡು
ಹಿಂಡು 2
ಸ್ಮರಣೆ ಮಾತ್ರದಿಂದಲವನು ಪಾಪವ ಕರಣವ ಶುದ್ಧೀಕರಿಸುತಲಿ
ಸನ್ಮತಿ ಇರಿಸುವನು
ಪುರು ಪುರುಷಾರ್ಥಕರ ಪದಪದ್ಮವನಿರಿಸಿ ಶಿರದಿ ಸತ್ಕರಿಸುವನು
ಮನದಲ್ಲಿರಿಸಿದವರನನುಸರಿಸುವನು 3