ಹೊಲೆಯರಿಲ್ಲದ ಊರೊಳು ಇರಬಾರದು ಪ
ಹೊಲೆಯರು ಬೆಳೆದರೆ ಉಣಲುಂಟು ಉಡಲುಂಟು ಅ.ಪ.
ಶುಭ ಶೋಭನ ಉಂಟುಹೊಲೆಯರ ನಿಂದಕನು ನಿರ್ಭಾಗ್ಯನುಹೊಲೆಯರಿಗೆ ಉಣಲಿಕ್ಕಿದವನ ಫಲಕ್ಕೆನೆಲೆಗಾಣೆ ನೆಲೆಗಾಣೆ ಧರೆಯೊಳಗೆ ನಾನು 1
ಹೊಲೆಯರು ಮುನಿದರೆ ನೆಲೆಯಿಲ್ಲ ನಿಭ ಇಲ್ಲಹೊಲೆಯರು ಒಲಿದರೆ ಕಷ್ಟವಿಲ್ಲಹೊಲೆಯರೇ ನಮ್ಮ ಸಲಹಲಿ ಸಾಕಲಿ ಎಂದುಫಲ್ಗುಣನ ಸಾರಥಿಯ ಪ್ರಾರ್ಥಿಸಿಕೊಳ್ವರು 2
ಹೊಲೆಯರಿಂದಲಿ ಸಕಲ ದೇವತೆಗಳ ಪೂಜೆಹೊಲೆಯರಿಂದಲಿ ಸಕಲ ಬಂಧು ಬಳಗಹೊಲೆಯರಿಗೆ ಸ್ವಾಮಿ ಮೋಹನ್ನ ವಿಠ್ಠಲಧೊರಿಯೆ ಪಾಂಡವರ ಪ್ರಿಯನೆಂದೆನ್ನು 3