ಒಟ್ಟು 13 ಕಡೆಗಳಲ್ಲಿ , 11 ದಾಸರು , 13 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರಾನಂದ ಉದಧಿವರ್ಧನನೆಂದು ಪ ಕಂದರ್ಪಕೋಟಿ ಲಾವಣ್ಯನಿಧಿ ಮನಪೊಂದು ಅ.ಪ ನಾನು ನನ್ನದು ಎಂಬ ಜ್ಞಾನ ಸಂತತಿಯಿಂದ ನಾನಾ ಯಾತನೆ ಭಾವ ಬಲೆಯ ಕಟ್ಟಿ ಹೀನಗೋಜಿಲಿ ಸಿಕ್ಕಿ ಬಲುನೊಂದೆ ಗೋವಿಂದ ನೀನು ನಿನ್ನದು ಎಂಬ ಅಮೃತಗಾನದಿ ನಿಲಿಸು 1 ದರ್ವಿಯಂದದಿ ನಾನು ನೀ ಸರ್ವ ಸ್ವಾತಂತ್ರ ನಿರ್ವಾಹ ನಿನ್ನಿಂದ ಸರ್ವ ಜಗಕೆ ದೂರ್ವ ಏರಿಸೆ ಸಕಲ ದುರಿತವಳಿಸಿ ಮುಕ್ತಿಸುಖ ತೋರ್ವಂಥ ಗುಣನಿಧಿ ಸರ್ವಾತ್ಮ ಹೊರೆ ಹೊರೆಯೊ 2 ನಿನ್ನ ದರುಶನ ಬಿಟ್ಟು ಅನ್ಯತ್ರ ನಿರ್ಭೀತಿ ಎನ್ನಲಿ ಎಂದೆಂದು ವೇದವೇದ್ಯ ನಿನ್ನ ದರುಶನ ಫಲಕೆ ನಿನ್ನ ಮಹಕರುಣ ಇನ್ನು ಕಾರಣದೇವ ಧನ್ಯರಲಿ ಇಡು ಎನ್ನ 3 ಮನೋವಿಕಾರಗಳೆಂಬ ದುಃಖಾರ್ಣದಿ ಬಿದ್ದು ಅನುಮಾನ ಮಾಡಿದೆನೊ ನಿನ್ನ ಅಮೃತ ತನುಧ್ಯಾನ ಮನಕಿಡಿಯದೇನುಗತಿ ಯದುವರ್ಯ ತೃಣಕೆ ಕೈವಲ್ಲೀವ ತ್ರ್ಯಧೀಶಮನಪೊಂದು 4 ಜ್ಞಾನಮನ ಬಿಡದಿರು ದೀನ ಬಾಂಧವ ಕೃಷ್ಣ ಇನ್ನು ಮಾಯವನು ತೆಗೆದೆನ್ನ ಬೆರೆಯೊ ಜ್ಞಾನನಿಧಿ ಜಯೇಶವಿಠಲನೆ ವಿಧಿವಂದ್ಯ ಪ್ರಾಣಾಧಾರಕ ಶುಕನ ಆನಂದನಿಧಿ ಪಾಹಿ 5
--------------
ಜಯೇಶವಿಠಲ
(41ನೇ ವರ್ಷದ ವರ್ಧಂತಿ) ಸತ್ಯ ಸಂಕಲ್ಪಾನುಸಾರದಿ ನಡೆಸುವುದುತ್ತಮ ಬಿರುದಾದರು ಭೃತ್ಯನ ಬಿಟ್ಟನೆಂಬಪಕೀರ್ತಿ ಬರದಂತೆ ಚಿತ್ತದಲ್ಲಿರಲಾದರು ಪ. ಕಳೆದಿತು ಐದೆಂಟು ಮೇಲೊಂದು ವತ್ಸರ ಬೆಳೆದಿತು ಬಲು ಮತ್ಸರ ನೆಲನ ಮೇಲಡಿಯಿಡಲಿಲ್ಲ ಶಕ್ತಿಯು ಇಂಥ ಛಲದಿ ತೋರುವಿ ತಾತ್ಸಾರ ಬಳುಕಿ ಬಾಡಿದ ದೇಹವುಳುಹಲುತ ಸೇವಾ ಫಲಕೆ ಕಾರಣವೆಂಬೆನು ನಳಿನನಾಭನೆ ನಿನ್ನ ಮನವೆಂತಿರುವುದೆಂದು ತಿಳಿಯದೆ ಬಳಲುವೆನು 1 ವಯಿನು ತಪ್ಪಿದ ಬಳಿ- ಕ್ಯಾತರಗುಣವಪ್ಪುದು ಭೂತಪಂಚಕ ಸನ್ನಿಪಾತ ಸೂಚಿಸುವಂತೆ ಕಾತರತೆಯು ತಪ್ಪದು ಈ ತೆರದಲಿ ದೇಹ ರೀತಿಯಾಗಿರುವುದ ನೀ ತಿಳಿದಿರಲೆನ್ನಯ ಮಾತ ಕೇಳದೆ ಲಕ್ಷ್ಮೀನಾಥ ತಾತ್ಸಾರವಿಂತು ನೀತಿಯಾಗದು ಚಿನ್ಮಯ 2 ಜನನ ಮರಣ ಜೋಡಾಗಿರುವುದೆಂಬ ಸಿದ್ಧ ನಿನಗಿದು ಸುಲಭಸಾಧ್ಯ ಮನೆವಾರ್ತೆ ಮಡದಿ ಮಕ್ಕಳು ಮುಂತಾದುದಕೆಲ್ಲ ವನಜಾಕ್ಷ ನೀನೆ ಬಾಧ್ಯ ಕನಸಿಲಾದರು ನಿನ್ನ ನೆನವ ತಪ್ಪಿಸದಿರು ವಿನಯ ವೆಂಕಟರಾಯನೆ ನಿನಗಿಲ್ಲದಪಕೀರ್ತಿ ಎನಗಿಲ್ಲ ಮಹದಾರ್ತಿ ಘನಕಲ್ಪ ಸುರಭೂಜನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ತುರುಕರಿಲ್ಲದ ಊರೊಳು ಇರಬಾರದು ಪ ತುರುಕರು ಜಗದೊಳು ಪರಮ ಶ್ರೇಷ್ಠರು ಕಾಣೋ ಅ.ಪ. ತುರುಕರು ಕರೆದರೆ ಉಣಬಹುದು ಉಡಬಹುದುತುರುಕರಿಂದಲಿ ಜಗಕೆ ಪರಮ ಸೌಖ್ಯಾ ||ತುರುಕರ ಸೇವೆ ಮಾಡಿದ ಮಾನವೋತ್ತಮನುಎರಡೊಂದು ಋಣದಿಂದ ಮುಕ್ತನಾಹಾ 1 ತುರುಕರಾ ನಿಂದಕನು ಪರಮ ದುಃಖಿಯು ಸಿದ್ಧತುರುಕರ ಅರ್ಚಿಸಿದವಗೆ ಪರಮ ಪದವೀ ||ತುರುಕರಿಗೆ ಗ್ರಾಸವಿತ್ತವನ ಫಲಕೆಲ್ಲು ಸರಿಗಾಣೆಸರಿಗಾಣೆ ಧರೆಯೋಳು ಅವನೆ ಧನ್ಯಾ 2 ಪತಿ ಬೈಗು ಬೆಳಗೂ ||ತುರುಕರಾ ಪಾಲ ಶ್ರೀ ಗೋಪಾಲಕೃಷ್ಣನ್ನಸ್ಮರಣೆ ಮಾಡುತಲಿರೆ ಮೋಹನ್ನ ವಿಠಲ ಒಲಿವಾ 3
--------------
ಮೋಹನದಾಸರು
ನೀನೇನ ಮಾಡಲಾಪಿಯೋ ಲಕುಮೀಶಾ | ನಾನೀಗ ಪಡೆದದ್ದು ಉಣದಲೆ ಪೋಗುವದೆ | ಪ ಲೋಕದೊಳಗೆ ನಿನ್ನ ಕೊಂಡಾಡಿ ಪ್ರತಿದಿನ ಏಕ ಭಕುತಿಲಿ ಸರ್ವೋತ್ತಮನೆಂದು ಏಕಾಂತ ಭಜಿಪÀ ಮನುಜಗಾದರು ಬರೆದ ವಾಕು ತಪ್ಪುವದೇನೋ ಅಜನು ನಿರ್ನೈಸಿದ1 ಮುಂದೆ ಕೊಡುವ ಫಲಕೆ ಕರ್ತ ನೀನಲ್ಲದೆ ಹಿಂದಣಿಂದಲಿ ಬರುವ ಕಾಲಾಖ್ಯಕೆ ಒಂದು ಬಿಂದು ಮಾತ್ರ ತೊಲಗಿಪ ನಡತಿ ಕಾಣೆ ಅಂದಲ್ಲಿ ಏನು ಫಲ ಎನ್ನ ಕರ್ಮವಷ್ಟೇ 2 ಇದ್ದದೊಂದು ಮರಿ ಅಡಗಾಣಿಸಿ ಬಂದು ಹದ್ದು ತಾ ವೈಯಲು ಆ ಕುರುಬ ಯೆಲ್ಲಿ ಇದ್ದರೇನು ಭಯ ವಿಜಯವಿಠ್ಠಲ ನಿನ್ನ ಪೊದ್ದಿದವಗಾದರು ಅನುಭವಿಸದೆ ಬಿಡದು3
--------------
ವಿಜಯದಾಸ
ಪತಿ ವಿಠಲ | ಉದ್ದರಿಸೊ ಇವಳ ಪ ಮೋದದಾಯಕನಾಗಿ | ಶ್ರೀದ ಶ್ರೀಹರಿಯೇ ಅ.ಪ. ದಾಸರಾಯರ ಕರುಣ | ವಾಶ್ರಯಿಸಿ ದಿನದಿನದಿಲೇಸು ಕೊಂಡಾಡುತಲಿ | ಮೇಶ ದಾಸರನೂಭಾಸುರ ಸುಗಾನ ಉ | ಲ್ಲಾಸದಲಿ ಮೈಮರೆದುಕೇಶವನ ಗುಣವನಧಿ | ಈಸುವಂತೆಸಗೋ 1 ವ್ಯಾಜ ಕರುಣೀಮಾಜದಲೆ ವೆಂಕಟನ | ನೈಜ ರೂಪವ ಕಂಡವ್ಯಾಜದಲ್ಲಿಂಕಿತಳು | ವಾಜಿ ಮುಖ ಹರಿಯೇ 2 ವಲ್ಲಭೆಯು ಶ್ರೀ ತುಳಸಿ | ಚೆಲ್ವಶಿಲೆ ಸುತ್ತುತಲಿನಲ್ಲ ಹರಿಪರಿ ಪೂರ್ಣ | ಎಲ್ಲೆಡೆಯಲೆಂಬಾಸೊಲ್ಲನಿವಳಿಗೆ ತೋರಿ | ಸಲ್ಲಿಸಿಹ ಹರಿಸೇವೆಬಲ್ಲವರ ಬಲ್ಲರೋ | ಘುಲ್ಲಕರಿಗಲ್ಲಾ 3 ಹರಿಗುರೂ ಸದ್ಭಕ್ತಿ | ಗುರು ಹಿರಿಯರ ಸೇವೆ ಕರುಣಿಸುತ ಕನ್ಯೆಯನು | ಪೊರೆಯುವುದು ಸತತಗಿರಿಜೆ ದರ್ಶನ ಫಲಕೆ | ಸರುವ ಮಂಗಳವಿತ್ತುನಿರುತ ಸಲಹೆಂದಿವಳ | ಪ್ರಾರ್ಥಿಸುವೆ ಹರಿಯೇ 4 ಮಧ್ವರಾಯರ ಮತದಿ | ಶುದ್ಧ ಬುಧಿಯನಿತ್ತುಮಧ್ವೇಶ ಹರಿಪಾದ | ಹೃದ್ಗುಹದಿಕಾಂಬಅಧ್ಯಾನಲ್ಲಿವಳ | ಬದ್ಧಳನೆ ಮಾಡಿ ಪೊರೆಮಧ್ವಾಂರಾತ್ಮ ಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಪರಿಪೂರ್ಣಕಾಮೆ ಶ್ರೀ ರಮೆ ಪ ಕಮಲದಳ ಸಮ ವಿಮಲ ಚರಣಯುಗೆ ಅಮಲ ಜಂಘಾನ್ವಿತೆ ಶುಭಗೆ 1 ಕರ ಸದ್ಯೋರು ಇಭರಿಪು ಸಮಕಟೆ ಶುಭತಮ ಶುಭತಮ ನಾಭಿ ಸುತ್ರಿವಳೆ2 ಗುರು ವಾಸುದೇವವಿಠಲ ಪರಮಪ್ರಿಯೆ ಭವ- ಶರಧಿ ತಾರಕೆ ಚಂದ್ರಫಲಕೆ3
--------------
ವ್ಯಾಸತತ್ವಜ್ಞದಾಸರು
ಲೋಕನೀತಿ ಅಧಿಕಾರಿಯಾಗಬೇಕು ಅದಕಾಗಿ ದುಡಿಯಬೇಕು ಪ ಅಧಿಕಾರಿಯಾಗುವುದು ಸುಲಭವಲ್ಲ ಎದೆಚಾಚಿ ಜಗದಿ ಹೆಮ್ಮೆಯ ತೋರುವ ಅ.ಪ ಶಾಶ್ವತವಿರಬೇಕು ಅದನೀಶ್ವರ ಕೊಡಬೇಕು ವಿಶ್ವವಿದ್ಯಾನಿಲಯವ ಸೇರುತಲಿ ಶಶ್ವದಿ ಪರವಿದ್ಯಾಶಾಖೆಯಲಿ 1 ಭೂಷಣವೆನಗೆಂದು ನೀ ಮೋಸ ಹೋಗಬೇಡ ಸಾಸಿರ ಸಾಸಿರ ಸ್ಥಾನಗಳಿಗೆ ನೀ ಆಸೆ ಪಡದೆ ಹರಿಶಾಸನ ಸಭೆಯ 2 ಕಮ್ಮಿಯ ಪ್ರತಿಫಲಕೆ ನೀ ಸಮ್ಮತಿ ಕೊಡದಿರೆಲೊ ಮರ್ಮವರಿತು ಪರಲೋಕವ ಪಡೆಯಲು ಹಮ್ಮನು ಮುರಿಯುವ ಕಾರ್ಮಿಕ ಸಭೆಯ 3 ಕಾಲವರಿತು ಸತತ ನೀ ಮೇಲಕೇಳಬೇಕು ಬಾಲಗೋಪಾಲನು ನೆಲೆಸುವುದಕೆ ಹೃದ ಯಾಲಯ ರಚನೆಯ ಚತುರ ಶಿಲ್ಪಿಯ 4 ಶ್ರವಣ ಮಾಡಬೇಕು ಶಾಸ್ತ್ರವ ಮನನ ಮಾಡಬೇಕು ಶ್ರವಣ ಮನನ ನಿಧಿ ಧ್ಯಾಸನದಿಂದ ಪ್ರ ಸನ್ನ ಹರಿದಯದಿ ಸಿಗುವ ಮುಕುತಿಗೆ 5
--------------
ವಿದ್ಯಾಪ್ರಸನ್ನತೀರ್ಥರು
ಶರಣಾಗತಿಯೊಂದೆ ಸಾಧನ ಮಾಧವ ಪ ಶರಣಾಗತಿಯಿಂದ ಹರಿಯ ಪ್ರಸಾದವು ಹರಿಯ ಪ್ರಸಾದವು ಪುರುಷಾರ್ಥಕೆ ಸಾಧನ ಅ.ಪ ಹರಿಯಲಿ ಚಿತ್ತವು ಹರಿಯಲಿ ಭಕುತಿಯು ಹರಿಯುದ್ದೇಶದಿ ಯಜನಾದಿಗಳು ಹರಿಯ ಚರಣದಲಿ ನಮ ನವು ಇದನೇ ಶರಣಾಗಿಯೆಂದರುಹಿದ ನುಡಿ ಕೇಳಿÀದೆ 1 ಸರ್ವೋತ್ತಮ ನೀನೊಬ್ಬನೆ ಎನ್ನುವ ದಿವ್ಯಜ್ಞಾನವ ಪೊಂದುತ ಮನದಲಿ ಸರ್ವಾಧಿಕ ನಿಶ್ಚಲ ಪ್ರೇಮ ಸಹಿತ ಸರ್ವಕರ್ಮ ನಿನ್ನೊಳಗರ್ಪಣೆ ಮಾಡುವೆ 2 ತ್ರಿವಿಧ ಪೂಜೆಗಳಲಿ ರತಿಯು ಹರಿಯ ಪ್ರಸನ್ನತೆಯಲಿ ನಂಬುಕೆಯು ಹರಿದಾಸನು ನಾನೆಂಬುವ ನಂಬಿಕೆ ಶರಣಾಗತಿಯಿದು ಮೋಕ್ಷಫಲಕೆ ಸಾಧನ 3
--------------
ವಿದ್ಯಾಪ್ರಸನ್ನತೀರ್ಥರು
ಸಾರಥಿ ರಮಾಪತಿ ನೀನೇ ಗತಿ ಪ ಕಾಪಾಡುವರಾರೊ ಕರುಣಾ ನಿಧಿ ಬಾರೋ ಅ.ಪ ವ್ಯಕ್ತಾವ್ಯಕ್ತ ಸ್ವರೂಪ ವೇದ ವೇದ್ಯ ಮುರಹರ 1 ಕುಬುಜೆಗಂಧ ಕೊಲಿದನೆ ಅಬುಜನಾಭ ಮುಕುಂದನೆ ಶಬರಿಯಿತ್ತ ಫಲಕೆ ಮೆಚ್ಚಿ ಶಾಶ್ವತ ಫಲವಿತ್ತವನೆ 2 ಎನ್ನ ಪಾಲಿಸುವ ಭಾರವು ನಿನ್ನದು ಗುರುರಾಮ ವಿಠಲ 3
--------------
ಗುರುರಾಮವಿಠಲ
ಕೋಲೆಂದು ಪಾಡಿರೆ ಬಾಲೆ ದ್ರೌಪತಿ ದೇವಿಮೇಲಾದ ಗುಣವ ಕೊಂಡಾಡಿಕೋಲಪ.ಫುಲ್ಲನಯನೆಯರ ಕರಿಯೆ ನಲ್ಲೆ ದ್ರೌಪತಿ ದೇವಿಮೆಲ್ಲನೆ ಹೆಜ್ಜೆ ನಿಕ್ಕಿದಳುಕೋಲಉಲ್ಹಾಸವಾಗೋದು ನಿಲ್ಲದೆ ನಡೆಯಮ್ಮಹಲ್ಲಿ ಮಾತಾಡಿದವಾಗ ಕೋಲ 1ಬಡನÀಡ ಬಳುಕುತ ನಡೆದಳು ದ್ರೌಪತಿಅಡಿಗಳ ಘೆಜ್ಜಿ ಫಲಕೆಂದುಕೋಲಒಡೆÉಯ ರಂಗಯ್ಯ ನಿನಗೆ ಕಡು ಪ್ರೀತಿ ಮಾಡುವನಡೆಯೆಂದು ನುಡಿದರು ಹರುಷದಿ ಜನರು 2ಚಂದ್ರವದನೆಯರು ಕರಿಯೆ ಚಂದಾಗಿ ನಡೆಯಮ್ಮಒಂದೂಅನುಮಾನ ಬ್ಯಾಡವೆಕೋಲತಂದೆ ರಾಮೇಶ ಆನಂದವ ಪಡಿಸುವಎಂದು ಕುಂತೆಮ್ಮ ನುಡಿದಳುಕೋಲ3
--------------
ಗಲಗಲಿಅವ್ವನವರು
ಬಯಲಭಾವಿಯ ನೀರಿಗೆ ಬಂದಳೊಬ್ಬಳು ಬಾಲೆ |ಬಾಯಾರಿ ಬಿದ್ದಳು ಕೊಡವೊಡೆಯಿತು ನೀರುರುಳಿತು ಪ.ನೀರಿಲ್ಲದೆ ನೆರಳಿಲ್ಲದೆ ಬೇರಿಲ್ಲದೆ ಸಸಿಹುಟ್ಟಿಹೂವಿಲ್ಲದೆ ಕಾಯಿಲ್ಲದೆ ಅದು ಫಲಕೆ ಬಂದು ||ಕರವಿಲ್ಲದೆ ಕಾಲಿಲ್ಲದೆ ಕೊಯ್ವರಯ್ವರು ಆ ಹಣ್ಣನು |ಮರುಳಾಯಿತು ಮೂವತ್ತು ಸಾವಿರ ಮಂದಿ 1ಕುರುಡ ಕಂಡನು ಸರ್ಪನಡುವಿರುಳು ಬಾಹುದನು |ಮೂಕ ಕಂಡನು ಕನಸ ಕಿವುಡನು ಕೇಳಿದ ||ಇರವು ಹಾರಿತು ಗಗನಕೆ ಮರವು ಮುರಿಯಿತು ನೋಡಿ |ವಿಧಿತನ್ನ ಬೇಟಿಗೆ ಹೋಗುವ ಸಡಗರ ನೋಡಿ2ಕಿಚ್ಚಿನ ಕೊಡದವಳೆ ನೀ ಬಂದೆ ತೋರಣಗಟ್ಟಿ |ರಚ್ಚಿಗೆ ಬಾಹೋರು ನಾಲುವರೊಳಗೆಉಚ್ಚರಿಸಲೂ ಸಲ್ಲ ಕೇಳು ಪುರುಷನ ಸೊಲ್ಲಅಚ್ಚಪುರಂದರವಿಠಲ ತಾನೆ ಬಲ್ಲ 3
--------------
ಪುರಂದರದಾಸರು
ವಂದಿಸಿದರೆ ವಂದ್ಯರು ಪೂಜಿತರು ಮುಕುಂದಗೋವಿಂದ ಶ್ರೀಹರಿಯನ್ನುಎಂದೆಂದು ಕುಂದದಾನಂದವೈದಿಸುವಇಂದಿರೆಯರಸ ಭವಬಂಧಮೋಚಕನ ಪ.ಹತ್ತಶ್ವಮೇಧಾವಭೃಥಸ್ನಾನ ಮಾಡಲುಮತ್ರ್ಯರ್ಗೆ ಪುನರ್ಜನ್ಮಗಳಿಲ್ಲವೊಸತ್ಯಭಾಮಾಧವನಿಗೆ ನಿಷ್ಕಾಮದಿ ನಮಿಸಿಮತ್ತೊಮ್ಮೆ ನಮಿಸೆ ಮುಕ್ತಿಗೆ ಸಾಧನ 1ಕೋಟಿಸಹಸ್ರ ತೀರ್ಥಗಳಲಿ ಮಿಂದುಕೋಟಿಸಹಸ್ರ ವ್ರತಗಳಾಚರಿಸೆಕೋಟಿ ಭಾಂತಕಗೆ ನಮಿಸಿದ ಫಲಕೆ ಸರಿ ಪಾಸಟಿಷೋಡಶಕಳೆಯೊಳೊಂದಲ್ಲ2ಹೇಳೆನೆ ಇಂದಾದರು ನಮಿಸಿ ಶ್ರೀಲೋಲಶಾಙ್ರ್ಗಪಾಣಿಯನಸಾಲು ಜನ್ಮದಘವ ಹಾಳುಮಾಡಿ ಮುಕ್ತಿಓಲಗಕೆ ಕರೆವ ವೈಷ್ಣವ ಜನರ 3ಉರಶಿರದೃಷ್ಟಿಲಿ ಮನವಾಚದಲಿಚರಣಕರಗಳಲಿ ಜಾನುಗಳಲಿಧರೆಯಲಿ ಅಷ್ಟಾಂಗಪ್ರಣಾಮ ಮಾಳ್ಪರ್ಗೆಹರಿದು ಹೋಗೆ ಪಾಪವರ ಮುಕ್ತಿಈವ4ಸರುವಾಂಗವ ಧರೆಗೊಂದಿಸಿ ಭಕುತಿಲಿಹೊರಳಾಡಿ ಭೂಮಿಲಿ ಪರವಶದಿಹರಿಗೆ ನಮಿಸಲು ಮೈಗೊರೆದ ಧೂಳಿಯ ಕಣಾಪರಿಮಿತ ಸಹಸ್ರಾಬ್ದ ಪರಮಾಣ ಪದವಕ್ಕು 5ಸಿರಿಅಜಭವೇಂದ್ರಸುರರುಮಹಾಮುನಿನಿಕರನೃಪಮನುಜೋತ್ತಮರೆಲ್ಲಪರಮಭಕುತಿಲಿ ನಮಿಸೆ ಹರಿವಶನಾಗುವಹರಿಜನಕೆ ಮುಕ್ತಿಪಥಕಿದೆ ಪಾಥೇಯ 6ಅರ್ಚಿತ ಕೃಷ್ಣನ ನೋಡುತಾನಂದಾಶ್ರುಹುಚ್ಚನಂತೆ ನಮಿಸಿ ನಗುತ ಸುರಿಸಿಅಚ್ಯುತಾನಂತ ಸದ್ಗುಣನಿಧಿ ಭಕ್ತಪ್ರಿಯನಿಚ್ಚಪ್ರಸನ್ವೆಂಕಟನೆಂದುಚ್ಚರಿಸಿ7
--------------
ಪ್ರಸನ್ನವೆಂಕಟದಾಸರು
ಹರಿದಿನದಲಿ ಉಂಡ ನರರಿಗೆ -ಘೋರ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನರಕ ತಪ್ಪದು ಎಂದುಶ್ರುತಿಸಾರುತಲಿದೆಪ.ಗೋವ ಕೊಂದ ಪಾಪ, ಸಾವಿರ ವಿಪ್ರರ |ಜೀವಹತ್ಯದ ಮಾಡಿದ ಪಾಪವು ||ಭಾವಜನಯ್ಯನ ದಿನದಲುಂಡವರಿಗೆ |ಕೀವಿನೊಳಗೆ ಹಾಕಿ ಕುದಿಸುವ ಯಮನು 1ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿಗಳು |ಅಂದಿನ ಅನ್ನವು ನಾಯ ಮಾಂಸ ||ಮಂದರಧರನ ದಿನದಲುಂಡವರನು |ಹಂದಿಯ ಸುಡುವಂತೆ ಸುಡುವನು ಯಮನು 2ಅನ್ನ -ಉದಕ ತಾಂಬೂಲ - ದರ್ಪಣಗಳು |ಚೆನ್ನವಸ್ತ್ರಗಳೆಲ್ಲ ವರ್ಜಿತವು ||ತನ್ನ ಸತಿಯ ಸಂಗ ಮಾಡುವ ಮನುಜನ |ಬೆನ್ನಲಿ ಕರುಳ ಉಚ್ಚಿಸುವನು ಯಮನು 3ಜಾವದಜಾಗರಕ್ರತು ನಾಲ್ಕು ಸಾವಿರ |ಜಾವ ನಾಲ್ಕರ ಫಲಕೆ ಮಿತಿಯಿಲ್ಲವು ||ದೇವದೇವನ ದಿನದಿ ನಿದ್ರೆಗೈದರೆ ಹುರಿ - |ಗಾವಿಲಿಯೊಳು ಹಾಕಿ ಹುರಿಯುವ ಯಮನು 4ಇಂತು ಏಕಾದಶಿ ಉಪವಾಸಜಾಗರ |ಸಂತತ ಕ್ಷೀರಾಬ್ಧಿಶಯನನ ಪೂಜೆ ||ಸಂತೋಷದಿಂದಲಿ ಮಾಡಿದ ಜನರಿಗ - |ನಂತ ಫಲವನೀವ ಪುರಂದರವಿಠಲ 5
--------------
ಪುರಂದರದಾಸರು