ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೇ ನೀನೆಚ್ಚರಿಕೆ ಬಿಡದಿರು ಅನುದಿನವು ಹರಿಧ್ಯಾನದೊಳಗಿರು ಪ ವನಿತೆ ಧನಧಾರಿಣಿಯ ನೆಚ್ಚಿ ತನುವೆ ತಾನೆಂಬುದನುಚಿತವು ಅ.ಪ ಬರಿಯಕೈಯಲಿ ಭೂಮಿಗಳಿಸಿದೆ ದುರಿತಭಾರವ ಧರಿಸಿರ್ಪೆ ನರರೆ ಹರಿಸುವರಾರೋ ಕಾಣಿರ ಅರಿತುಕೊಂಡಿರೆ ತಿಳಿಸಿರೈ 1 ಕಾಯವಸ್ಥಿರ ಹೇಮಸಂಸ್ಕøತಿ ಮಾಯಾಪಾಶದ ಬಲೆಗೆ ಸಿಲ್ಕಿ ನಾಯಿನರಿಯಂದದಲಿ ತೊಳಲಿ ಸಾಯವರ ಕಂಡಳುವದೇಕೋ 2 ಜಾತಿಧನವಧಿಕಾರ ಖ್ಯಾತಿಗೆ ಆತುರದೊಳಭಿಮಾನ ಪಡುವೇ ಪಾತಕರೆ ಹಿಂಜರಿಯದಂತೇ ಪ್ರೀತಿಯಿಂ ಪರಪೀಡೆಗೈವೇ 3 ಪೊಡವಿಯೊಳ್ ಪೆಣ್ ಬಾಲ ವೃದ್ಧರು ಬಡವರಾರ್ತರು ಕುಂಟಕುರುಡರು ಎಡೆಯ ಜೀವಿಗಳನ್ನು ಕರುಣದಿ ಕಾಣೆಲೋ ಕಡುಜಾಣನೇ 4 ಸತ್ತಮೇಲೇನೆಂದು ಯೋಚಿಸು ಮುತ್ತಿ ಕತ್ತಿಯೊಳಿರಿವರೈ [ಮ]ತ್ತಕ್ಷಣದ ಫಲಕಾಶೆಪಡದಿರು ಸತ್ಯವಂ ಪಿಡಿ ನಿತ್ಯವೂ 5 ಯಮುನೆ ಹೊಕ್ಕರು ಯಮನು ಬಿಡನೂ ಅಮಮ ನರಕದೊಳಿಳಿಪರೈ ರಮಾರಮಣನ ಒಲುಮೆಗಾಗಿ ಶ್ರಮಿಸಿ ಪರರುಪಕಾರಿಯಾಗೋ6 ಪತಿತಪಾವನ ಜಾಜಿಕೇಶವ ನತಿಶಯದಿ ತಾ ಜಗವ ಪಾಲಿಪ ಚತುರ್ವೇದ ಶ್ರುತಿ ಪ್ರಮಾಣವ ಮತಿಯುತರು ಮೀರುವರೆ ಮರುಳೇ 7
--------------
ಶಾಮಶರ್ಮರು