ಕಂಸಾರಿ ಬೇಗ ಬಾರೋ ಹರಿ
ಭೇಷಜ ಕೃಷ್ಣ ಪ.
ಸಾಗರ ಶಯನ ಮನೋಗತ ಫಲಕಾರಿ
ಅಕ್ರಮದಲಿ ಬರುವ ಭಯಂಕರ
ವಕ್ರ ಮುಖವ ತೋರುವ
ಹರಿವು ಚಕ್ರವ ಕರಧೃತ
ಚಕ್ರದಿ ತರಿದು ಪರಾಕ್ರಮವ ತೋರಿ 1
ದಾಸರ ರಕ್ಷಿಪುದು ಎಂದಿಗು ಶ್ರೀನಿ-
ವಾಸ ನಿನ್ನಯ ಬಿರುದು
ದ್ವೇಷಿ ಜನರ ಮೂಲ ನಾಶಗೈದನುಗಾಲ
ಶ್ರೀಶತ್ವದ ಸೇವಾವಾಸನ ಬೆಳಸುತ್ತ 2
ನೀ ನೆಟ್ಟು ಬೆಳಸಿರುವ ವೃಕ್ಷವನು ನಿ-
ಧಾನದಿಂದಲಿ ಪೊರವ
ಮಾನ ನಿನ್ನದು ಪದ್ಮಮಾನ ವೆಂಕಟರಾಜ
ದೀನ ಬಂಧು ನಿನಗೇನ ಪೇಳುವದಿನ್ನು 3