ಭೂಮಂಡಲಕೆ ಮಿಗಿಲೆನಿಸಿದ ತಾಯಿಕಂಡು ಬಂದೆನೆ ಪಾಂಡವರ ಭಾಗ್ಯವ ಪ.
ಸಂಭ್ರಮದಿರಾಯನು ತುಂಬಿಸಿದ ಮನೆಯೊಳಗೆ ಉಂಬೊ ಪದಾರ್ಥ ಕೋಟಿ ಫಲಕದಳಿ ತಿಂಬೊ ಪದಾರ್ಥ ಕೋಟಿಷಡ್ರಸವೆಂಬೊ ಪದಾರ್ಥ ಕೋಟಿಈ ತೂಗಿಕೊಂಬ ಮಣಿಮಂಚ ಕೋಟಿ ತಾಯಿ1
ವಿತ್ತ ಕೋಟಿಯು ರಾಶಿ ರಾಯನಚಿತ್ತ ಸಂತೋಷ ರಾಶಿ 2
ಏಸುಮುನಿ ಬಳಗ ದಾಸರು ದಾಸಿಯರು ಬೀಸಿ ತೊಟ್ಟಿಲವ ತೂಗÀುವರುಮಕ್ಕಳನ ಸೋಸಿಲೆ ಕರೆದೊಯ್ಯುವರುಮಂಚದಲಿ ಹಾಸಿಗೆ ಹಾಸುವರು ರಾಯಗೆ ಈ ಬಗೆ ಸೇವಕರು ತಾಯೆ 3
ಎಲ್ಲ ಮನೆಯೊಳಗೆ ಮಲ್ಲಿಗೆ ಸಂಪಿಗೆ ಅಲ್ಲೆ ಕ್ಯಾದಿಗೆದವನವುಬುಕ್ಕಿಟ್ಟು ಅಲ್ಲಲ್ಲೆ ಶ್ರೀಗಂಧವುಎಲಿ ಅಡಕಿ ಅಲ್ಲಲ್ಲಿ ತಬಕಿಹೋದುರಾಯಗೆ ಈ ಬಗೆ ಸೇವಕರು ತಾಯೆ 4
ಆನೆಗಳು ಕಟ್ಯಾವ ಕುದರಿಯ ಸಾಲು ರಥಗಳು ಇಟ್ಟಾವ ಬಿಲ್ಲುಗಳು ಪಲ್ಲಕ್ಕಿ ಧಿಟ್ಟಾದ ವಯಿರಗಳು ರಮೆ ಅರಸಗಿಷ್ಟು ಉಪಚಾರಗಳು ತಾಯೆ 5