ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇವ ಬೆಲ್ಲದೊಳಿಡಲೇನು ಫಲಹಾವಿಗೆ ಹಾಲೆರೆದೇನು ಫಲ ? ಪ.ಕುಟಿಲವ ಬಿಡದಲೆ ಕುಜನರು ಮಂತ್ರವಪಠನೆಯ ಮಾಡಿದರೇನು ಫಲ?ಸಟೆಯನ್ನಾಡುವ ಮನುಜರು ಮನದಲಿವಿಠಲನ ನೆನೆದರೆ ಏನು ಫಲ ? 1ಮಾತಾ - ಷತೃಗಳ ಬಳಲಿಸುವಾತನುಯಾತ್ರೆಯ ಮಾಡಿದರೇನು ಫಲ ?ಘಾತಕತನವನು ಬಿಡದೆ ನಿರಂತರನೀತಿಯನೋದಿದರೇನು ಫಲ ? 2ಕಪಟತನದಲಿ - ಕಾಡುವರೆಲ್ಲರುಜಪಗಳ ಮಾಡಿದರೇನು ಫಲ ?ಕುಪಿತ ಬುದ್ಧಿಯನು ಬಿಡದೆ ನಿರಂತರಉಪವಾಸ ಮಾಡಿದರೇನು ಫಲ ? 3ಪತಿಗಳ ನಿಂದಿಸಿ ಬೊಗಳುವ ಸತಿಯರುವ್ರತಗಳ ಮಾಡಿದರೇನು ಫಲ ?ಅತಿಥಿಗಳೆಯಡೆಯಲಿ ಭೇದವ ಮಾಡಿ ಸದ್ಗತಿಯನು ಬಯಸಿದರೇನು ಫಲ ? 4ಹೀನ ಗುಣಂಗಳ ಬಿಡದೆ ನದಿಯೊಳುಸ್ನಾನವ ಮಾಡಿದರೇನು ಫಲ ?ಜಾÕನಿ ಪುರಂದರವಿಠಲನ ನೆನೆಯದೆಮೌನವ ಮಾಡಿದರೇನು ಫಲ? 5
--------------
ಪುರಂದರದಾಸರು