ನಾಗಲೋಕದ ಕಾಳಿ ಈಗಳೆ ಹಿಡಿಸುತನಾಗವೇಣಿಯರೆಲ್ಲ ಸಾಗಿ ಹೆಜ್ಜೆ ನಿಕ್ಕುತ ಈಗ ನೋಡುಣು ಬಾರೆ ಬ್ಯಾಗಸೆ ದ್ವಾರಕಾಸಾಗರ ಶಯನನಿನ್ನು ಪ.
ಅಂಬುಜಾಕ್ಷನು ತಾನು ಅತಿ ಬೇಗ ಹೊಯ್ಸಿದ ಜಂಬುದ್ವೀಪದ ಜಯಭೇರಿಜಂಬುದ್ವೀಪದ ಜಯಭೇರಿ ಹೊಯಿಸಲು ಕುಂಭಿಣಿ ಜನರೆಲ್ಲ ಕೂಡಿತು ಎಲೆ ಸಖಿ 1
ಏಳು ಲೋಕದ ಕಾಳಿಭಾಳೆ ರೌಸದಿ ಹಿಡಿಯೆಕಾಳಿ ಮರ್ದನನ ಮನೆಮುಂದೆಕಾಳಿ ಮರ್ದನನ ಮನೆಮುಂದೆ ಹಿಡಿಸಲುಏಳು ಲೋಕದ ಜನ ಮೇಳವ ನಮಗೆ ಎಲೆ ಸಖಿ2
ಕೋಟಿ ಕೋಟಿ ಹಿಲಾಲು ಥಾಟಾಗಿ ತೋರುವ ಹಾಟಗಾಂಬರನ ಮನೆಮುಂದೆ ಹಾಟಗಾಂಬರನ ಮನೆಮುಂದೆ ಬೆರಗಾಗಿಪಾಟಿಸಿ ನೋಡೋ ಪ್ರಜರೆಷ್ಟ ಎಲೆ ಸಖಿ 3
ಹತ್ತು ಕೋಟಿ ಹಿಲಾಲು ಜತ್ತಾಗಿ ತೋರುತಚಿತ್ತಜನೈಯನ ಮನೆಮುಂದೆಚಿತ್ತಜನೈಯನ ಮನೆಮುಂದೆ ಬೆರಗಾಗಿಅರ್ಥಿಲೆ ನೋಡೋ ಪ್ರಜರೆಷ್ಟ ಎಲೆ ಸಖಿ4
ನೂರು ನೂರು ಸಾವಿರ ತೋರುವ ಬಾಣ ಬಿರುಸುವಾರಿಜಾಕ್ಷನ ಮನೆಮುಂದೆ ವಾರಿಜಾಕ್ಷನ ಮನೆಮುಂದೆ ಈ ಸೊಬಗುಆರುವರ್ಣಿಸಲು ವಶವಲ್ಲ ಎಲೆಸಖಿ5
ಸಿಡಿಲು ಫರ್ಜಿಸಿದಂತೆ ಬಿಡುವ ಬಾಣಗಳೆಷ್ಟಧಡ ಧಡ ಹಾರುವ ಬಿರುಸೆಷ್ಟಧಡ ಧಡ ಹಾರುವ ಬಿರುಸೆಷ್ಟು ಮುಯ್ಯದ ಬೆಡಗವರ್ಣಿಸಲು ವಶವಲ್ಲ ಎಲೆಸಖಿ6
ಗರುಡನ ಆಭರಣವ ಮೃಡನು ವರ್ಣಿಸಲಾರ ಜಡಿದ ರತ್ನಗಳು ಝಳಪಿಸುತಜಡಿದ ರತ್ನಗಳು ಝಳಪಿಸುವÀ ವಾಹನವೇರಿಒಡೆಯ ರಾಮೇಶ ಕುಳಿತಾನೆ ಎಲೆಸಖಿ 7