ಸಾಮಾಜಿಕ ಕೀರ್ತನೆಗಳು
ಆಸೆತ ಬಿಡು ಮನವೆ ನಿನ್ನ ದುರಾಸೆಯ ಬಿಡು ಮನವೆ ಪ
ಆಸೆಯ ಬಿಟ್ಟು ಶ್ರೀವಾಸುದೇವನ ಪಾದ
ಘಾಸಿಯಾಗದೆ ನಂಬು ಲೇಸಾಗುವುದು ನಿನಗೆ ಅ.ಪ
ಕಾಮಕ್ರೋಧಗಳ ಬಿಟ್ಟು ಮೋಹಮದಡಂಭ ಅಸೂಯೆಸುಟ್ಟು
ಎಮ್ಮದು ತಮ್ಮದು ಎಂಬ ಭ್ರಾಂತಿಯ ಬಿಟ್ಟು
[ನಮ್ಮ] ವನಜನಾಭನ ಪಾದದೊಳಗೆ ನೀ ಮನವಿಟ್ಟು 1
ಬರಿದೆ ನವರತ್ನ ರಜತ ಸುವರ್ಣ ಧನಧಾನ್ಯದಾಶೆಯ ಬಿಟ್ಟು
ನಿರಾಶೆಯೊಳಿರು ನೀನು 2
ಹಾನಿವೃದ್ಧಿ ಯಶೋಲಾಭಗಳೆಲ್ಲ ಸ್ವಾಮಿಯಧೀನವಲ್ಲದೆ
ನೀನು ಯೋಚನೆಯನ್ನು ಮಾಡಿಯೆ ಫನವೇನು
ಪಾದ ನೇಮದಿಂದಲೆ ನಂಬು 3