ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಕ್ಷ್ಮೀ ದೇವಿ ಇಂದಿರೆ ನಾ ನಿನ್ನ ವಂದಿಸಿ ಬೇಡುವೆ ಬಂದು ನೀ ಪಾಲಿಸೇ ಚಂದಿರವದನೆ ಪ ಸಿಂಧು ಕುಮಾರಿಯೆ ಎಂದಿಗೂ ನಿನ್ನ ಪದ ದ್ವಂದ್ವವ ಸೇವಿಪೆನೆಂದು ನಾ ಬೇಡುವೆ ಅ.ಪ ದೇವಿ ನಿನ್ನಂಘ್ರಿಯ ಸೇವಿಸಿ ಪದ್ಮಭವ ಭಾವಿ ಫಣೇಶ ಸುರಾಧಿಪರೆಲ್ಲರು ಈ ವಿಧವಾದನುಭಾವವ ಪೊಂದಿರಲು ಈ ವಿಷಯಕೆ ಶ್ರುತಿ ಸಾವಿರವಿರುವುದೆ 1 ಪನ್ನಗವೇಣಿಯೆ ನಿನ್ನನೆ ನಂಬಿರಲು ಸಣ್ಣ ಮನುಜರ ವರ್ಣಿಪುದೇಕೆಲೆ ಎನ್ನಪರಾಧವ ಮನ್ನಿಸಿ ಕೃಪೆಯನು ಎನ್ನೊಳು ತೋರಲು ಧನ್ಯ ನಾನಾಗುವೆ 2 ತಾಮರಸಾಕ್ಷಿಯೆ ನಾಮಗಿರೀಶ ಶ್ರೀ ಸ್ವಾಮಿ ನೃಸಿಂಹನ ಕಾಮಿನೀಮಣಿಯೇ ಕೋಮಲಗಾತ್ರಯೆ ಶ್ರೀ ಮಹಾಲಕ್ಷ್ಮಿ ಎನ್ನ ಸಹೋದರಿ 3
--------------
ವಿದ್ಯಾರತ್ನಾಕರತೀರ್ಥರು