ಇಂದಿರೆ ಇಂದೀವರಾಕ್ಷಿ- ಸುಂದರಿ ಅರ-
ವಿಂದ ಮಂದಿರೆ ಪೂರ್ಣೆ | ಪ
ಇಂದುವದನೆ ಅಮರೇಂದ್ರ ವಂದಿತೆ |
ಸಿಂಧುಸುತೆ ಆನಂದ ಫಲದೆ ಅಪ
ರಾರರಮಣನ ಸೋಲಿಪ ನಖದಕಾಂತಿ |
ಚಾರು ಚರಣತಳ ವಾರಿಜಾಂಕುಶ ಧ್ವಜ |
ವಾರಣ ಕನಕ ಮಂಗಳರೇಖೆವೊಪ್ಪೆ | ನೂ-
ಪುರ ಕಡಗ ಪೆಂಡ್ಯೆ ಪರಡೆ ಜಾನು ಜಂಘೆ |
ಕಟಿ ನಾಭಿ ಉದರ ತ್ರಿವಳಿ |
ಧಾರ ಶೋಭನವಾದ ಹೊನ್ನುಡಿ |
ಧಾರ ಕಿಂಕಿಣಿ ತೋರಮುತ್ತಿನ-
ಹಾರ ಉರವಿಸ್ತಾರ ಗುಣವಂತೆ 1
ಕಂಬು -
ಗ್ರೀವ ಸರಿಗೆ ದಿವ್ಯಚಂದನ ಲೇಪಿಸಿ |
ಕಂಚುಕ ಹಸ್ತಕಡಗ ಮುದ್ರೆ
ಪ್ರವಳಮಣಿಯು ಕೇಯೂರ ದಂಡೆಯ ಸರ |
ಬೇವಿನೆಸಳಂತೆ ಪುಬ್ಬು ಢಾಳಿಪ |
ತಾವರೆಯ ಫಣೆಯೂ ಸಂಪಿಗೆ |
ನಾಸಿಕ ವೇಣಿ |
ಹಾವಿನಂದದಿ ಒಪ್ಪುತಿರೆ ದೇವಿ 2
ವಾಲೆಮೂಗುತಿ ಹೊನ್ನಹೂವು ತೂಗುವ ತುಂಬು |
ಕದಪು ಮುಂಗೂದಲು |
ಮೇಲೆ ರ್ಯಾಕಟೆ ಚೌರಿ ಮುಡಿದ ಕುಸುಮವು |
ಸಾಲು ಮುತ್ತಿನ ಜಾಳಿಗೆ ಗೊಂಡ್ಯ ಶಿರದಲ್ಲಿ |
ಪಾಲ ಸಾಗರ ಶಾಯಿ ವಿಜಯವಿ-
ಠ್ಠಲರೇಯನ ಉತ್ಸಾಹದಲಿ |
ತೋಳಿನಲ್ಲಿ ಬಿಗಿದಪ್ಪಿ ಪವಳಿಪ |
ಶ್ರೀ ಲಕುಮಿ ತ್ರೈಲೋಕ್ಯ ಮಾತೆ 3