ಕಂಡೆಯಾ - ಮನವೇ - ನೀನಿಂದು - ಕಂಡೆಯಾ ಪ
ಕಂಡೆಯ ಮನವೆ ನೀನಿಂದು - ತನ್ನತೊಂಡರ ಸಲಹುವ ಬಂಧು - ಆಹಮಂಡೆಯ ಬೋಳಿಸಿ | ಪುಂಡರೀಕಾಕ್ಷನೆಹಿಂಡು ದೈವಂಗಳ | ಗಂಡನೆಂದೇಳ್ವರ ಅ.ಪ.
ಪಾದ ಸೊಬಗು - ವೇಗತೆರಳುತ್ತಿದ್ದರದು ಮೆಲ್ಲಗು - ನಖವರರತ್ನ ಕೆಂಪಿನ ಬೆಡಗು - ಊರುಕರಿಯ ಸೊಂಡಿಲಿನಂತೆ ಬೆಳಗು _ ಆಹ ಪರಿಶುದ್ದ ಕಟಿಯಲ್ಲಿ | ಸುರಚಿರಾಂಬರನುಟ್ಟುವರಕಂಠ ಫಣೆಯುದರ | ತ್ರಿವಳಿಯಂ ಮೆರೆವರ 1
ಮೃದುರೋಮ ಶಾಲು ಪ್ರಾವರಣ - ನೋಡಲದು ಭಾಸ ಉದಯಾರ್ಕ ವರಣ - ಪೋಲ್ವದದು ಮೇರು ಗಿರಿಯಂತೆ - ವರ್ಣ ನೋಡುಎದೆಯ ವಿಸ್ತರಾ ಭರಣ - ಆಹಸದಮಲುನ್ನತಾಂಸ | ಉರುಟು ನೀಳದ ತೋಳುಪದುಮ ರಾಗದ ಭಾಸ | ಧ್ವಜರೇಖೆ ಹಸ್ತವ 2
ಮೋದ ಪೋಲ್ವ - ಮತ್ತೆಮಂದ ದೂರನು ಅತಿ ಚೆಲ್ವಾ - ಆಹಕುಂದಾಭ ರದನವು | ಸುಂದರಾರುಣ ಓಷ್ಠಮಂದಜೇಕ್ಷಣ ನೋಟ | ದಿಂದ ಬೀರುವ ಮುದ 3
ಕಿವಿಗಳಲೊಪ್ಪುವ ತುಳಸೀ - ಮೂರುಭುವನ ಭೂತಿ ಭ್ರೂವಿಲಾಸಿ - ಮತ್ತೆಅವನೆ ಅಭೂತಿದನೆನಿಸೀ - ಚೆಲ್ವದವಡೆಯಿಂದೊಪ್ಪುವ ಶಿರಸಿ - ಆಹಅವಯವ ಲಕ್ಷಣ | ಪ್ರತಿ ಪ್ರತಿ ಜನ್ಮದಿವಿವರವೀತೆರವೆಂದು | ವಿಭುದರು ತಿಳಿದರು 4
ಈ ವಿಶ್ವವೆಲ್ಲವೂ ಸತ್ಯ - ಮತ್ತೆಸಾರ್ವ ಭೇದವು ತಾರತಮ್ಯ - ವಿಧಿಪೂರ್ವಕಲ್ವೊರೆಯುತ್ತ ದಿವ್ಯ - ತತ್ವಸಾರ್ವವ ಪೇಳುತ್ತ ಭವ್ಯ - ಆಹಕಾವ ಕೊಲ್ಲುವ ಗುರು ಗೋವಿಂದ ವಿಠಲನೆಸರ್ವೋತ್ತುಮಾನೆಂದು | ಈ ವಿಧ ಮೆರೆವರ 5