ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಜ | ನಮಿಪರ ಸುರಭೋಜ ಗುರುರಾಜ ಪ. ವರತಂದೆ ಮುದ್ದುಮೋಹನರೆಂದೆನಿಸುತ ಮೆರೆಯುತ ಜಗದೊಳು ಪೊರೆಯುವ ಕರುಣಿ 1 ಅಜ್ಞತೆ ತೊಲಗಿಸಿ ಸುಜ್ಞತೆ ಕೊಡುತಲಿ ವಿಘ್ನವ ತರಿಯುವ ಪ್ರಾಜ್ಞ ಮೂರುತಿಯೆ 2 ಸರಸಿಜಾಕ್ಷನ ಪದ ಹರುಷದಿ ಭಜಿಸುವ ಪರಮಪ್ರಿಯರು ಎಂದು ಬಿರುದು ಪೊತ್ತಿಹರೆ 3 ನಾಗಶಯನನಿಗೆ ಭೋಗವಪಡಿಸುವ ಆಗಮಜ್ಞರೆ ನಿಮಗೆ ಬಾಗುವೆ ಸತತ 4 ಸಾಸಿರ ಫಣೆಯಿಂದ ಸೂಸುವ ಕಾಂತಿಯೊಳ್ ವಾಸವ ವಿನುತ 5 ದೇವತಾಂಶದ ಗುರು ಪವಮಾನಿಗೆ ಪ್ರಿಯ ಭಾವಿಸಿ ಭಜಿಪರ ಕಾವ ಕರುಣಾಳು 6 ಶಾಂತಚಿತ್ತದಿ ಬಹು ಸಂತೋಷಪಡುತಲಿ ಅಂತರಂಗದಿ ಹರಿಯ ಚಿಂತಿಸುತಿರುವ 7 ಉದ್ಭವಿಸಿ ಜಗದಿ ಅಧ್ಭುತ ಮಹಿಮೆಯ ಒಬ್ಬೊಬ್ಬರಿಗೆ ತೋರಿ ಹಬ್ಬಿಪೆ ಹರುಷ 8 ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನನು ದೃಷ್ಟಿಗೆ ತೋರಿಸಿ ಕಷ್ಟ ಬಿಡಿಸಿರಿ 9
--------------
ಅಂಬಾಬಾಯಿ